ಕಾಸರಗೋಡು ಕೋಟೆ ದೀಪಾವಳಿ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಕಾಸರಗೋಡು ಕೋಟೆ ದೀಪಾವಳಿ ನೇಮೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ಕಾಸರಗೋಡು :ಇತಿಹಾಸ ಪ್ರಸಿದ್ಧ ಕಾಸರಗೋಡು ಕೋಟೆ ಚಾವಡಿ ಶ್ರೀ ದೂಮಾವತಿ ದೈವ ಕೋಲವು ದಿನಾಂಕ 31.10.2024.ದೀಪಾವಳಿ ದಿನದಂದು ನಡೆಯಲಿರುವುದು. ದೀಪಾವಳಿ ನೇಮೋತ್ಸವ ವೆಂದೇ ಪ್ರಖ್ಯಾತಿ ಪಡೆದಿರುವ ಈ ಕೋಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಾಸರಗೋಡು ಕೋಟೆ ಶ್ರೀ ದೂಮಾವತಿ ಉತ್ಸವ ಸಮಿತಿ ವತಿಯಿಂದ,, ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ದಲ್ಲಿ ಬಿಡುಗಡೆಗೊಳಿಸಲಾಯಿತು. ಉತ್ಸವ ಸಮಿತಿ ಅಧ್ಯಕ್ಷರಾಧ ಪಾಂಗೋಡು ನವೀನ್ ನಾಯ್ಕ್ ನಾಗರಕಟ್ಟೆ, ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷರೂ ಉತ್ಸವ ಸಮಿತಿ ಕೋಶಾಧಿಕಾರಿಯೂ ಆದ ಶ್ರೀ ವಾಮನ್ ರಾವ್ ಬೇಕಲರೀಗೆ ಆಮಂತ್ರಣ ಪತ್ರಿಕೆ ನೀಡಿ ಬಿಡುಗಡೆ ಗೊಳಿಸಿದರು. ಈ ಸಂದರ್ಭದಲ್ಲಿ ನಾಗೇಶ್ ನಾಯಕ್ ಮಂಗಳೂರು, ನಿರಂಜನ್ ಕೊರಕ್ಕೊಡು, ಸಂತೋಷ್ ನಾಯ್ಕ್ ಪುತ್ತೂರು, ಭಾಸ್ಕರ್ ರಾವ್ ಮಂಗಳೂರು, ರಮೇಶ್ ಕುಂಬಳೆ, ಜಯಂತಿ ಕೋಟೆಕಣಿ, ಕಾರ್ತಿಕ್ ಕಾಸರಗೋಡು, ಪ್ರಜ್ವಲ್ ನಾಯ್ಕ್ ನಾಗರಕಟ್ಟೆ, ಶ್ರಿಕಾಂತ್ ನಾಗರಕಟ್ಟೆ, ಕನ್ನಡ ಭವನದ ಸಂದ್ಯಾ ರಾಣಿ ಟೀಚರ್ ಮುಂತಾದವರಿದ್ದರು