ಬೆಳ್ತಂಗಡಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು:
ಬೆಳ್ತಂಗಡಿ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು:
ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆಯ ಬೆಳ್ತಂಗಡಿ ಸಮೀಪದ ಕಾಶಿಬೆಟ್ಟು ಎನ್ನುವಲ್ಲಿ ಚರಂಡಿಗೆ ಬಿದ್ದ ಘಟನೆ ಅ. 16 ರಂದು ಸಂಭವಿಸಿದೆ.
ಉಡುಪಿಯಿಂದ ಮೂವರು ಯುವಕರು ಆರಿಕೋಡಿ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭ ಬೆಳಗ್ಗೆ ಸುಮಾರು 4:45ರ ವೇಳೆಗೆ ಈ ಘಟನೆ ಸಂಭವಿಸಿದೆ. ನಿದ್ದೆಯ ಮಂಪರಿನಲ್ಲಿ ಈ ಘಟನೆ ನಡೆದಿದ್ದು, ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಮೂವರೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳದಲ್ಲಿ ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದ ಕ್ರೇನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಯಿತು. ಈ ಹಿಂದೆ ರಸ್ತೆ ಬದಿಯ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದ್ದ ವೇಳೆ ಕಬ್ಬಿಣದ ಸರಳುಗಳು ಅಪಾಯವನ್ನು ತಂದೊಡ್ಡುವಂತಿತ್ತು. ಕೆಲವೆಡೆ ಇನ್ನೂ ಕೂಡ ಅಪಾಯಕಾರಿಯಾಗಿದ್ದು, ಆಯ ತಪ್ಪಿದರೆ ಸವಾರರ ಜೀವಕ್ಕೆ ಕುತ್ತು ಎನ್ನುವಂತಿದೆ.