ಗಡಿನಾಡ ಕಾಸರಗೋಡು ಕನ್ನಡ ರಾಜ್ಯೋತ್ಸವ ಆಚರಣೆ 2024
ಗಡಿನಾಡ ಕಾಸರಗೋಡು ಕನ್ನಡ ರಾಜ್ಯೋತ್ಸವ ಆಚರಣೆ 2024
ಕಾಸರಗೋಡು :ಗಡಿನಾಡ ಗಾನಕೋಗಿಲೆ ಕಲಾವಿದರ ಸಂಘ ಮತ್ತು ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ನಡೆಯುವ ಗಡಿನಾಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಕಾಸರಗೋಡು ಕನ್ನಡ ಭವನ ಸಂಸ್ಥಾಪಕ ಅಧ್ಯಕ್ಷ, ಕಾಸರಗೋಡು ದಸರಾ ರೂವಾರಿ, ಕನ್ನಡ ಭವನ ಪ್ರಕಾಶನ, ಪ್ರಕಾಶಕರು, ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಕಾಸರಗೋಡು ಗಡಿನಾಡಿನಲ್ಲಿ ಕನ್ನಡ ಸಾಹಿತ್ಯ, ಸಂಸ್ಕೃತಿ ಯ ಉಳಿವಿಗಾಗಿ ಅನವರತ ದುಡಿಯುತ್ತಿರುವ ಶ್ರೀ ವಾಮನ್ ರಾವ್ ಬೇಕಲ್ ರೀಗೆ “ಗಡಿನಾಡು ಕನ್ನಡ ರಾಜ್ಯೋತ್ಸವ ಸನ್ಮಾನ “ನೀಡಿ ಗೌರವಿಸಲಾಗುವುದು ಎಂದು ಗಡಿನಾಡ ಕಲಾವಿದರ ಸಂಘ ಅಧ್ಯಕ್ಷ ವಸಂತ ಭಾರಡ್ಕ ಹಾಗೂ ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಅಧ್ಯಕ್ಷ ಬಿ. ಶಿವಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ