ಅವಹೇಳನಕಾರಿ ಶಬ್ದ ಬಳಕೆ: ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅರೆಸ್ಟ್:
ಅವಹೇಳನಕಾರಿ ಶಬ್ದ ಬಳಕೆ: ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅರೆಸ್ಟ್:
ಬೆಳ್ಳಾರೆ: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಹುಡುಗಿಯರ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿ ಹೇಳಿಕೆ ಸಂಬಂಧಿಸಿದಂತೆ ಅರಣ್ಯ ಸಂರಕ್ಷಣಾ ಅಧಿಕಾರಿ ಸಂಜೀವ ಪೂಜಾರಿಯವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಸಂಜೀವ ಪೂಜಾರಿ ವಿರುದ್ಧ ಹಿಂದೂ ಜಾಗರಣಾ ವೇದಿಕೆಯಿಂದ ಬೆಳ್ಳಾರೆ ಪೋಲಿಸ್ ಠಾಣೆಗೆ ದೂರು ನೀಡಲಾಗಿತ್ತು. ಜವಾಬ್ದಾರಿಯುತ ಸರಕಾರಿ ಹುದ್ದೆಯಲ್ಲಿದ್ದರೂ ಸಂಜೀವ ಪೂಜಾರಿಯವರು ಬೇಜಬ್ದಾರಿಯಿಂದ ಸಮಾಜದ ವಿವಿಧ ಜಾತಿ, ಪಂಗಡ ಮಧ್ಯೆ ದ್ವೇಷ ಉಂಟುಮಾಡುವಂತಹ ಹೇಳಿಕೆ ನೀಡಿರುತ್ತಾರೆ. ಇವರ ವಿರುದ್ಧ ಹಿಂದೂ ಸಂಘಟನೆಯ ಮುಖಂಡರು ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು, ಇದೀಗ ಸಂಜೀವ ಪೂಜಾರಿಯವರನ್ನು ಬೆಳ್ಳಾರೆ ಪೋಲಿಸರು ಬಂಧಿಸಿದ್ದಾರೆ.