ಅಸಹಾಯಕರ ಕಷ್ಟಕ್ಕೆ ಮರುಗಿ ಅವರಿಗೆ ಮಾಡುವ ಸೇವೆಯೇ ಅತ್ಯಂತ ಶ್ರೇಷ್ಠ ವಾದ ಕಾರ್ಯ
ಅಸಹಾಯಕರ ಕಷ್ಟಕ್ಕೆ ಮರುಗಿ ಅವರಿಗೆ ಮಾಡುವ ಸೇವೆಯೇ ಅತ್ಯಂತ ಶ್ರೇಷ್ಠ ವಾದ ಕಾರ್ಯ
ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಸುಂದರಿ (ಪಕೀರ ಅವರ ಪತ್ನಿ )ಅವರು ಕಳೆದ ಕೆಲ ವರುಷಗಳಿಂದ ಮಾನಸಿಕ ಅಸ್ವಸ್ತೆಯಾಗಿ ತಮ್ಮ ಮನೆ ಬಳಿ ಯಾರನ್ನು ಬರಲು ಬಿಡದೆ ಒಬ್ಬಂಟಿಯಾಗಿದ್ದು ಅತ್ಯಂತ ಶೋಚನಿಯ ಸ್ಥಿತಿಗೆ ತಲುಪಿದ್ದರು.
ಇಂತಹ ಸಂಧರ್ಭದಲ್ಲಿ ಬಂಬಿಲ ಮಹಾದೇವಿ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ರಂಗಕರ್ಮಿ ಕೃಷ್ಣಪ್ಪ ಬಂಬಿಲ ಇವರ ನೇತೃತ್ವದಲ್ಲಿ ಇಂದು ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಇಲ್ಲಿಗೆ ಕಳುಹಿಸಿ ಕೊಡುವ ಯೋಚನೆಯೊಂದಿಗೆ ಕಾರ್ಯಪ್ರವೃತ್ತರಾಗಿ ಮಾತುಕತೆ ನಡೆಸಿ ಅಲ್ಲಿಗೆ ಕಳುಹಿಸಿಕೊಡಲಾಗಿದೆ.
ಈ ಸಂಧರ್ಭ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಕುಶಲ. ಬಿ. ಆಡಳಿತ ಮಂಡಳಿ ಸದಸ್ಯರುಗಳು,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂದರಿ ಬಿ ಯಸ್ ಪಂಚಾಯತ್ ಸದಸ್ಯರಾದ ಸತೀಶ್ ಅಂಗಡಿಮೂಲೆ,ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮತ್ತು ಸವಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಇಂದಿರಾ. ಬಿ. ಕೆ.ಮತ್ತು ಶಶಿಕುಮಾರ್ ಬಿ ಎನ್ ರವಿ. ಬಿ ಬಾಬು ಬಿ ಬಾಬು ಬಿ.ಸಿ ಮಹಾಮಾಯಿ ಭಜನಾ ಮಂಡಳಿಯ ಸದಸ್ಯರುಗಳು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.