ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ:
ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ:
ಮಂಗಳೂರು: ಯಕ್ಷಗಾನದ ಹಾಸ್ಯರಾಜ ಎಂದೇ ಖ್ಯಾತರಾಗಿದ್ದ ಹನುಮಗಿರಿ ಮೇಳದ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದವರಿಗೆ ಮುಂಜಾನೆ 4 ಗಂಟೆಗೆ ಹೃದಯಾಘಾತ ಸಂಭವಿಸಿದ್ದು ಜೊತೆ ಕಲಾವಿದರು ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಫಲವಾಗದೆ ನಿಧನರಾಗಿದ್ದಾರೆ.
ಹಾಸ್ಯ ಪಾತ್ರಗಳಿಗೆ ಅದರದ್ದೇ ಆದ ಜೀವಂತಿಕೆ ತುಂಬುವ ಪ್ರತಿಭೆ ಹೊಂದಿದ್ದ ಜಯರಾಮ ಆಚಾರ್ಯರು ಪೋಷಕ ಪಾತ್ರಗಳನ್ನೂ ನಿರ್ವಹಿಸ ಬಲ್ಲವರಾಗಿದ್ದರು. ಚೆಂಡೆ, ಮದ್ದಲೆ, ಭಾಗವತಿಕೆಯಲ್ಲೂ ಪರಿಣಿತರಾಗಿದ್ದರು. ಯಕ್ಷಗಾನದ ಸರ್ವ ಅಂಗಗಳಲ್ಲಿ ಪರಿಶ್ರಮವುಳ್ಳ ಕಲಾವಿದರಾಗಿದ್ದರು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.