ಕೊಂಬಾರು ನೂತನ ಮೊಗೇರ ಗ್ರಾಮ ಸಮಿತಿ ರಚನೆ ಮತ್ತು ಮಾಹಿತಿ ಕಾರ್ಯಕ್ರಮ
ಕೊಂಬಾರು ನೂತನ ಮೊಗೇರ ಗ್ರಾಮ ಸಮಿತಿ ರಚನೆ ಮತ್ತು ಮಾಹಿತಿ ಕಾರ್ಯಕ್ರಮ
ಕಡಬ ತಾಲೂಕು ಮೊಗೇರ ಸಂಘದ ನೇತೃತ್ವದಲ್ಲಿ ಕೊಂಬಾರು ಗ್ರಾಮದ ನೂತನ ಮೊಗೇರ ಗ್ರಾಮ ಸಮಿತಿ ಪದಾಧಿಕಾರಿಗಳ ಆಯ್ಕೆ ಕೆಂಜಾಳದಲ್ಲಿ 20/10/24 ನೇ ಆದಿತ್ಯವಾರ ನಡೆಯಿತು. ಕೆಂಜಾಳದ ಪಂಚಲಿಂಗೇಶ್ವರ ಯುವಕ ಮಂಡಲ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬ ಮೊಗೇರ ಸಂಘದ ಅಧ್ಯಕ್ಷರಾದ ಶಶಿಧರ್ ಬೊಟ್ಟಡ್ಕ ವಹಿಸಿದ್ದರು
. ಹಿರಿಯರಾದ ಮಾಂಕು ಮೊಗೇರ ಕಾರ್ಯಕ್ರಮ ಉದ್ಘಾಟಿಸಿದರು,ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಸ್ತಾವಿಕವಾಗಿ ಕಂದಾಯ ಇಲಾಖೆ ಉಪತಹಶೀಲ್ದಾರ್ ವಿಜಯ್ ವಿಕ್ರಂ ಗಾಂಧಿಪೇಟೆ ಮಾತನಾಡಿ ಹಲವು ಮಾಹಿತಿಗಳನ್ನು ನೀಡಿದರು. ನಂತರ ಬೆಳ್ತಂಗಡಿ ಉಪವಲಯ ಅರಣ್ಯಾಧಾಕಾರಿಗಳಾದ ರವಿಚಂದ್ರ ಪಡುಬೆಟ್ಟು, ಉಪನ್ಯಾಸಕರಾದ ಬಾಲಕೃಷ್ಣ ಕೇಪುಳು ವಿವಿಧ ವಿಷಯಗಳ ಬಗ್ಗೆ ಉಪಯುಕ್ತ ಮಾಹಿತಿ ತಿಳಿಸಿದರು.
ಸುಳ್ಯ ಮೊಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ ಇವರು ನೂತನವಾಗಿ ಆರಂಭವಾಗಲಿರುವ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ನ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕೊಂಬಾರು ಮೊಗೇರ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಕಮಲಾಕ್ಷ ಬೊಟ್ಟಡ್ಕ, ಉಪಾಧ್ಯಕ್ಷರಾಗಿ ಕಿಟ್ಟು ಬೊಟ್ಟಡ್ಕ, ಕಾರ್ಯದರ್ಶಿಯಾಗಿ ರೇವತಿ ಬೀಡು, ಕೋಶಾಧಿಕಾರಿಯಾಗಿ ತನಿಯಪ್ಪ ಬೊಟ್ಟಡ್ಕ ಆಯ್ಕೆಯಾದರು. ಮೊಗೇರ ರ ಪ್ರತೀ ಮನೆಯ ಮಾಹಿತಿ ಸಂಗ್ರಹದ ಉದ್ದೇಶದ ನಮೂನೆಯನ್ನು ಬಿಡುಗಡೆ ಮಾಡಲಾಯಿತು.
ದಯಾನಂದ ಮಿತ್ತ ಬೈಲು ಕಾರ್ಯಕ್ರಮ ನಿರೂಪಿಸಿದರು. ಗೋಪಾಲ್ ಬೀಡು,ಜನಾರ್ದನ ಬೊಟ್ಟಡ್ಕ, ವಸಂತ ಕುಬಲಾಡಿ, ಮಹೇಶ್ ಕೊಕ್ಕಡ, ಸಂದೀಪ್ ಪಾಂಜೋಡಿ, ಸುರೇಶ್ ತೋಟಂತಿಲ, ಶೀನ ದೇರೋಡಿ, ಕೆ ಪಿ ಆನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.