• 21 ಮಾರ್ಚ್ 2025

ದಾಖಲೆಯಿಲ್ಲದೆ ಗೋ ಸಾಗಾಟ; ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರು ವಾಪಸ್‌

 ದಾಖಲೆಯಿಲ್ಲದೆ ಗೋ ಸಾಗಾಟ; ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರು ವಾಪಸ್‌
Digiqole Ad

ದಾಖಲೆಯಿಲ್ಲದೆ ಗೋ ಸಾಗಾಟ; ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರು ವಾಪಸ್‌

ವಿಟ್ಲ: ಕೇರಳಕ್ಕೆ ವಾಹನದ ಮೂಲಕ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಮಾಹಿತಿ ಮೇರೆಗೆ ತಡೆದ ಮಾಣಿಲದ ಬಜರಂಗ ದಳ ಕಾರ್ಯಕರ್ತರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ತನಿಖೆ ಮಾಡಿದಾಗ, ಎರಡು ಜಾನುವಾರುಗಳನ್ನು ವ್ಯಕ್ತಿಯೊಬ್ಬರು ಮಾರಾಟ ಮಾಡಿದ್ದು, ಆ ಜಾನುವಾರುಗಳನ್ನು ಸಾಕುವ ಉದ್ದೇಶದಿಂದ ಖರೀದಿಸಿದ್ದಾರೆಂದು ತಿಳಿದುಬಂದಿತ್ತು. ಆದರೆ ಸಾಗಾಟಕ್ಕೆ ಸೂಕ್ತ ಅನುಮತಿ ಪತ್ರ ಇರಲಿಲ್ಲ.
ಆದುದರಿಂದ ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರುಗಳನ್ನು ಕಳುಹಿಸಲಾಗಿದ್ದು, ಕಾನೂನಾತ್ಮಕವಾಗಿ ಸಂಪೂರ್ಣ ದಾಖಲೆಯೊಂದಿಗೆ ವಾಹನದಲ್ಲಿ ಸಾಗಾಟ ಮಾಡಲು ವಿಟ್ಲ ಪೊಲೀಸರು ಸೂಚಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ