• 7 ಡಿಸೆಂಬರ್ 2024

ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

 ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ
Digiqole Ad

ಪಟಾಕಿ ಮಾರಾಟಕ್ಕೆ 13 ಸ್ಥಳ ನಿಗದಿ; ಬೆಳಕಿನ ಹಬ್ಬಕ್ಕೆ ಭರದ ಸಿದ್ಧತೆ

ಬೆಳಕಿನ ಹಬ್ಬ ದೀಪಾವಳಿಗೆ ಕರಾವಳಿಯಲ್ಲಿ ಸಿದ್ಧತೆಗಳು ಶುರುವಾಗಿದೆ. ಸಡಗರ ಸಂಭ್ರಮದಿಂದ ಆಚರಿಸುವ ಈ ಹಬ್ಬ ಆಚರಣೆ ವೇಳೆ ಹಣತೆ ಹಚ್ಚುವುದು ಒಂದೆಡೆಯಾದರೆ, ಪಟಾಕಿ ಸಿಡಿಸಿ ಚಟಾಕಿ ಹರಿಸುವುದು ಮತ್ತೂಂದೆಡೆ. ಪಟಾಕಿಗಳನ್ನು ಬಾನಂಗಳಕ್ಕೆ ಹಾರಿಸಲು ಕಾತರತೆ ಹೆಚ್ಚಾಗಿದೆ. ಇದಕ್ಕಾಗಿ ಸಿದ್ಧತೆಗಳು ಶುರುವಾಗಿವೆ.
ಪಟಾಕಿಗಳು ಸೂಕ್ಷ್ಮವಾಗಿರುವ ಕಾರಣದಿಂದಾಗಿ ಬೇಕಾಬಿಟ್ಟಿ ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಲು ಅವಕಾಶವಿಲ್ಲ. ಈ ಕಾರಣದಿಂದಾಗಿ ನಗರ ವ್ಯಾಪ್ತಿಯಲ್ಲಿ ಪಾಲಿಕೆ ಗೊತ್ತು ಮಾಡಿದ ಸ್ಥಳಗಳಲ್ಲೇ ವ್ಯಾಪಾರ ನಡೆಸುವಂತೆ ನಿರ್ದೇಶಿಸಿದೆ. ಈ ಪೈಕಿ ನೆಹರೂ ಮೈದಾನದಲ್ಲಿ ಅತ್ಯಧಿಕ ಸ್ಟಾಲ್‌ಗ‌ಳಿಗೆ ಅವಕಾಶ ಕಲ್ಪಿಸಲು ಪಾಲಿಕೆ ಮುಂದಾಗಿದೆ. ದೀಪಾವಳಿ ಹಾಗೂ ತುಳಸಿ ಪೂಜೆಯ ಸಂದರ್ಭದಲ್ಲಿ ತಾತ್ಕಾಲಿಕ ಚಿಲ್ಲರೆ ಪಟಾಕಿ ಮಾರಾಟಕ್ಕೆ ಗುರುತಿಸಲಾಗಿರುವ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅನುಮತಿ ಸಿಗಲಿದೆ.
13 ಸ್ಥಳಗಳಲ್ಲಿ 89 ಸ್ಟಾಲ್‌ಗ‌ಳು
ಪಾಲಿಕೆಯ ಮೊದಲ ವಲಯದಲ್ಲಿ ಕೃಷ್ಣಪುರ ಪ್ಯಾರಡೈಸ್‌ ಮೈದಾನ, ಎ.ಪಿ.ಎಂ.ಸಿ. ಕಟ್ಟಡದ ಮುಂಭಾಗದ ತೆರೆದ ಜಾಗ, ಆದರ್ಶ ಯುವಕ ಮಂಡಲ ಮಹಿಳಾ ಸಮಿತಿ ಗಣೇಶಪುರ ಕೈಕಂಬಗಳಲ್ಲಿ ಒಟ್ಟು 15 ಸ್ಟಾಲ್‌ಗ‌ಳಿವೆ. ಎರಡನೇ ವಲಯದಲ್ಲಿ 8 ಸ್ಥಳಗಳಿದ್ದು 89 ಸ್ಟಾಲ್‌ಗ‌ಳಿಗೆ ಅನುಮತಿ ನೀಡಲು ಪಾಲಿಕೆ ಮುಂದಾಗಿದೆ. ಕದ್ರಿ ಕ್ರಿಕೆಟ್‌ ಮೈದಾನ, ಪದವು ಹೈಸ್ಕೂಲ್‌ ಮೈದಾನ, ಬೊಂದೇಲ್‌ ಕ್ರಿಕೆಟ್‌ ಮೈದಾನ, ಪಚ್ಚನಾಡಿ ಮೈದಾನ, ನೆಹರು ಮೈದಾನ, ಅತ್ತಾವರ ನಾಯಕ ಮೈದಾನ, ಎಮ್ಮೆಕೆರೆ ಮೈದಾನ, ಉರ್ವ ಕ್ರಿಕೆಟ್‌ ಮೈದಾನ ಸೇರಿದೆ.
ವಲಯ ಮೂರರಲ್ಲಿ ಪಂಪ್‌ವೆಲ್‌ ಬಸ್‌ ನಿಲ್ದಾಣಕ್ಕೆ ನಿಗದಿ ಪಡಿಸಿದ ಜಾಗ ಹಾಗೂ ಶಕ್ತಿನಗರ ಮೈದಾನ ಆಯ್ಕೆ ಮಾಡಲಾಗಿದ್ದು 10 ಮಂದಿಗೆ ವ್ಯಾಪಾರಕ್ಕೆ ಅವಕಾಶ ಸಿಗಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ