ಕಡಬ :ತಾಲೂಕು ಸೇವಾಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆ. ಸಾಧನೆಯ ಹಾದಿಯಲ್ಲಿ ಅಡೆತಡೆಗಳು ಸಹಜ :ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್.
ಕಡಬ :ತಾಲೂಕು ಸೇವಾಪ್ರತಿನಿಧಿಗಳ ಪ್ರಗತಿ ಪರಿಶೀಲನಾ ಸಭೆ.
ಸಾಧನೆಯ ಹಾದಿಯಲ್ಲಿ ಅಡೆತಡೆಗಳು ಸಹಜ :ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆಯ ಕಡಬ ತಾಲೂಕಿನ ಸೇವಾಪ್ರತಿನಿಧಿಗಳ ಅರ್ಧವಾರ್ಷಿಕ ಪ್ರಗತಿ ಪರಿಶೀಲನಾ ಸಭೆಯು ಕಡಬ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಧ್ಘಾಟಿಸಿದ ದಕ್ಷಿಣಕನ್ನಡ 02 ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಮಾತನಾಡಿ ಸಮಾಜದ ಸುಧಾರಣೆಯಲ್ಲಿ ಶ್ರಮಿಸುತ್ತಿರುವ ಪ್ರತಿಯೊಬ್ಬರಿಗೂ ಪ್ರತಿಸ್ಪರ್ಧಿಗಳು ಸಹಜ. ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯಿಂದ ಸಮಾಜದಲ್ಲಾದ ಅನೇಕ ಬದಲಾವಣೆಗಳು , ಅಭಿವೃಧ್ಧಿ ಕಾರ್ಯಗಳು ಪೂಜ್ಯರ ದೂರದಷ್ಟಿತ್ವದ ಸಂಕೇತ..ಆರ್ಥಿಕ ನೆರವುನೀಡುವ ಕಾರ್ಯಕ್ರಮಗಳಲ್ಲಿ ಅನೇಕ ವಿಧದ ಸವಾಲುಗಳು ಎದುರಾಗುತ್ತಿರುತ್ತದೆ. ರಾಜ್ಯ ವ್ಯಾಪ್ತಿಯಲ್ಲಿ ಪಸರಿಸಿರುವ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರ ಆರ್ಥಿಕ ಅಭಿವಧ್ಧಿಗೆ ಪೂರಕವಾದ ಸಂಘದ ಪ್ರಗತಿ ನಿಧಿ ಸಾಲ ಸೌಲಭ್ಶಗಳು ರಾಷ್ಟ್ರೀಕತ ಬ್ಯಾಂಕಿನ ಅನುಮೋದನೆಯೊಂದಿಗೆ ಕಾನೂನಾತ್ಮಕವಾಗಿ ನಡೆಯುತ್ತಿರುತ್ತದೆ.. ಬ್ಯಾಂಕ್ ಹಾಗೂ ಧರ್ಮಸ್ಥಳ ಯೋಜನೆಯ ವ್ಯಾವಹಾರಿಕ ಒಪ್ಪಂದವು ಎಸ್ ಬಿ ಐ ಬ್ಯಾಂಕಿನ ಮೂಲಕ ಮಾಡಿದ್ದು ಕಾನೂನಾತ್ಮಕವಾಗಿ ಒಪ್ಪಂದದ ಪ್ರತಿಯನ್ನು ನೀಡಲು ಸಾಧ್ಯವಿದೆಯೇ ಹೊರತು ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಯಾವುದೇ ಸಂಘಟನೆಗಳಿಗೆ ಒಪ್ಪಂದದ ಪ್ರತಿಯನ್ನು ನೀಡಲು ಅವಕಾಶವಿರುವುದಿಲ್ಲ ಅಗತ್ಯವಿದ್ದಲ್ಲಿ ಕಾನೂನಾತ್ಮಕವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು.ಸಮಾಜದ ದುರ್ಬಲ ವರ್ಗದ ಜನರಲ್ಲಿ ಬದುಕಿನ ಭರವಸೆಯನ್ನು ಮೂಡಿಸಿ ಕುಟುಂಬದ ಸರ್ವತೋಮುಖ ಅಭಿವೃಧ್ಧಿಗೆ ಶ್ರಮಿಸುತ್ತಿರುವ ಅನೇಕರಿಗೆ ಭರವಸೆಯೊಂದಿಗೆ ಜೀವನದ ದಾರಿಯನ್ನು ತೋರಿಸುತ್ತಿರುವ ಸದೃಢ ಯೋಜನೆಯ ಪ್ರಗತಿಯಲ್ಲಿ ಅಡೆತಡೆಗಳು ಬರುವುದು ಸಹಜ ಅವುಗನ್ನೆಲ್ಲಾ ಸ್ವೀಕರಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದಾಗಲೇ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆಯಲು ಸಾಧ್ಯವೆಂದರು.
ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ನಾವೂರು ಸೇವಾಪ್ರತಿನಿಧಿಗಳಲ್ಲಿರಬೇಕಾದ ವೃತ್ತಿ ಬದ್ದತೆ ಹಾಗೂ ಮುಂದಿನ ಗುರಿ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಎಮ್ ಐ ಎಸ್ ಯೋಜನಾಧಿಕಾರಿಗಳಾದ ಶಕುಂತಲಾ ಬ್ಯಾಂಕಿಂಗ್ ಸೌಲಭ್ಯಗಳಿಗೆ ಸಂಘದಿಂದ ನೀಡಬೇಕಾದ ದಾಖಲಾತಿಗಳು ಹಾಗೂ ನೀಡಬೇಕಾದ ದಾಖಲಾತಿಗಳ ಸಮಯದ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಹಣಕಾಸು ಪ್ರಭಂದಕಿ ಸುಜಾತ, ತಾಲೂಕಿನ ಸೇವಾಪ್ರತಿನಿಧಿಗಳ ವಾರ್ಷಿಕ ಗುರಿ ಹಾಗೂ ಅರ್ಧವಾರ್ಷಿಕ ಸಾಧನೆಗಳ ವಿವರದ ಗಣಕೀಕೃತ ಮಾಹಿತಿಯನ್ನು ಪ್ರದರ್ಶಿಸಿದರು.
ನೆಲ್ಯಾಡಿ ವಲಯ ಮೇಲ್ವೀಚಾರಕ ಆನಂದ್ ಡಿ ಬಿ ಸ್ವಾಗತಿಸಿ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ವಂದಿಸಿದರು.
ಆಲಂಕಾರು ವಲಯ ಮೇಲ್ವೀಚಾರಕಿ ಸುಜಾತ ಕಾರ್ಯಕ್ರಮ ನೀರೂಪಿಸಿದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ತಾಲೂಕು ಕೃಷಿ ಮೇಲ್ವೀಚಾರಕ ಸೋಮೇಶ್ ತಾಲೂಕು ವಿಚಕ್ಷಣಾಧಿಕಾರಿ ಶೀಲಾ, ತಾಲೂಕು ಸಿ ಎಸ್ ಸ್ಸಿ ನೊಡಲ್ ಅಧಿಕಾರಿ ರಕ್ಷಕ್ ಹಾಗೂ ಮೇಲ್ವೀಚಾರಕ ಶ್ರೇಣಿ ಸಿಬ್ಬಂಧಿಗಳು ,ಕಛೇರಿ ಸಹಾಯಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.