ಕಡಬ : ಕೆಂಜಾಳದಲ್ಲಿ ಪಂಚಮಿ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ* *ಮಹಿಳೆಯರಿಗೆ ಜ್ಞಾನವಿಕಾಸ ಕೇಂದ್ರ ಜ್ಞಾನದೇಗುಲ ವಿದ್ದಂತೆ. :- ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ.*
ಕಡಬ : ಕೆಂಜಾಳದಲ್ಲಿ ಪಂಚಮಿ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ
ಮಹಿಳೆಯರಿಗೆ ಜ್ಞಾನವಿಕಾಸ ಕೇಂದ್ರ ಜ್ಞಾನದೇಗುಲ ವಿದ್ದಂತೆ. :- ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ.
ಮಹಿಳೆಯರಿಗೆ ಜ್ಞಾನವಿಕಾಸ ಕೇಂದ್ರ ಜ್ಞಾನದೇಗುಲ ವಿದ್ದಂತೆ. :- ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಳಿನೆಲೆ ವಲಯ ಕೆಂಜಾಳ ಕೊಂಬಾರು ಕಾರ್ಯಕ್ಷೇತ್ರದ ಶ್ರೀ ಪಂಚಲಿಂಗಶ್ವರ ಯುವಕ ಮಂಡಲ ಕೆಂಜಾಳದಲ್ಲಿ ಪಂಚಮಿ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆಯು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೊಂಬಾರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರಾದ ಶಿವಪ್ರಸಾದ್ ಕಾಯರ್ತಡ್ಕ ಉದ್ಘಾಟಿಸಿದರು.
ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆಯವರು ಕೇಂದ್ರದ ನೂತನ ಸಂಯೋಜಕಿ ರೇಖಾ ರವರಿಗೆ ಕೇಂದ್ರ ನಿರ್ವಹಣೆ ಯ ದಾಖಲಾತಿ ಹಸ್ತಾಂತರಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಒಂದೇ ಗ್ರಾಮದ ಐದರಿಂದ-ಆರು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರನ್ನು ಒಟ್ಟುಗೂಡಿಸಿ ಜ್ಞಾನ ವಿಕಾಸ ಕೇಂದ್ರವಾಗಿ ರಚಿಸಿ ಪ್ರತೀ ತಿಂಗಳಿಗೆ ಒಂದು ಬಾರಿ ಸದಸ್ಯರ ಸಭೆ ನಡೆಸಿ ಯೋಜನೆಯ ಸೌಲಭ್ಯ ಗಳೊಂದಿಗೆ ಸರಕಾರದ ಸೌಲಭ್ಯಗಳ, ಸರಕಾರಿ ಇಲಾಖೆಗಳ ಮಾಹಿತಿ.. ಸದಸ್ಯರ ಪ್ರತಿಭೆಗಳಿಗೆ ವೇದಿಕೆಯ ನಿರ್ಮಾಣ ,ಸಭಾಕಂಪನ ಹೋಗಲಾಡಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರತಿಯೊಬ್ಬ ಮಹಿಳೆಯೂ ಪಾಲ್ಗೊಳ್ಳುವಂತೆ ಮಾಡುವುದೇ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಆಶಯವಾಗಿದೆ.
ಮಕ್ಕಳಿಗೆ ಶಾಲೆ ಜ್ಞಾನ ಕೇಂದ್ರವಾದರೆ ಮಹಿಳೆಯರಿಗೆ ಜ್ಞಾನ ವಿಕಾಸ ಕೇಂದ್ರವೇ ಜ್ಞಾನವನ್ನು ಹೆಚ್ಚಿಸುವ ಜ್ಞಾನ ದೇಗುಲವಾಗಲಿದೆ.ಕೇಂದ್ರದ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಲು ಶ್ರಮಿಸುವಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಂಬಾರು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ಗೌಡ ಕೋಲ್ಪೆ ವಹಿಸಿದ್ದರು.
ವೇದಿಕೆಯಲ್ಲಿ ಕೆಂಜಾಳ ಶ್ರೀ ಪಂಚಲಿಂಗೇಶ್ವರ ಯುವಕ ಮಂಡಲದ ಅಧ್ಶಕ್ಷರಾದ ವಿನೋದ್ ಹೊಲ್ಲರ್,ಸಿರಿಬಾಗಿಲು ಒಕ್ಕೂಟದ ಕೋಶಾಧಿಕಾರಿ ಚಿದಾನಂದ ದೇವುಪಾಲ್ ಮತ್ತು ಬಿಳಿನೆಲೆ ವಲಯ ಸಂರಕ್ಷಣಾ ವೇದಿಕೆಯ ಜತೆ ಕಾರ್ಯದರ್ಶಿ ಲೋಕೇಶ್ವರಿ ಪೋರ್ಧೆಲ್ ಉಪಸ್ಥಿತರಿದ್ದರು.
ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕೆಂಜಾಳ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಗಣೇಶ್ ಎ ವಂದಿಸಿದರು.
ಕೊಂಬಾರು ಸಿರಿಬಾಗಿಲು ವಿಭಾಗದ ಸೇವಾಪ್ರತಿನಿಧಿ ವಿನೋದ್ ಕೆ ಸಿ ಕಾರ್ಯಕ್ರಮ ನಿರೂಪಿಸಿದರು.
ಪಂಚಮಿ ಜ್ಞಾನ ವಿಕಾಸ ದ ಸದಸ್ಯರುಗಳು ಉಪಸ್ಥಿತರಿದ್ದರು.