ಸತತ 2ನೆಯ ಬಾರಿಗೆ ಯಶಸ್ವಿ ಹೆಜ್ಜೆಯನ್ನು ಇಡುತ್ತಿದೆ ಆಶೀರ್ವಾದ ಸಂಸ್ಥೆ
ಸತತ 2ನೆಯ ಬಾರಿಗೆ ಯಶಸ್ವಿ ಹೆಜ್ಜೆಯನ್ನು ಇಡುತ್ತಿದೆ ಆಶೀರ್ವಾದ ಸಂಸ್ಥೆ
ಆಶೀರ್ವಾದ್ ಲಕ್ಕಿ ಗಿಫ್ಟ್ ಸ್ಕೀಂ ಸಂಸ್ಥೆಯ ಧ್ಯೇಯೋದ್ದೇಶಗಳೇನು ಎಂಬುದನ್ನು ಮತ್ತೊಮ್ಮೆ ವಿವರಿಸುವ ಅಗತ್ಯವೇ ಇಲ್ಲ. ಯಾಕೆಂದರೆ ಹೆಸರಿನಲ್ಲೇ ಎಲ್ಲಾ ವಿಷಯಗಳನ್ನು ಉಲ್ಲೇಖಿತವಾಗಿದೆ.
ಆಧುನಿಕ ಜೀವನದ ಭರಾಟೆಯಲ್ಲಿ ನಮಗೆ ತೀರಾ ಅವಶ್ಯಕ ಎನಿಸುವ ವಸ್ತುಗಳನ್ನೇ ಖರೀದಿಸಲು ಅಥವಾ ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಎಲ್ಲರೂ ಕಂಡುಕೊಂಡ ಸತ್ಯ. ಸಾಧಾರಣ ಶ್ರೀಮಂತರೆನಿಸಿಕೊಂಡವರೇ ಇಷ್ಟು ಕಷ್ಟ ಪಡುತ್ತಿರುವಾಗ ಇನ್ನು ಜನಸಾಮಾನ್ಯರ ಕಥೆಯೇನು? ದುಡಿದ ಅಷ್ಟು ಹಣವನ್ನು ದಿನದ ಆಗುಹೋಗುಗಳಿಗೆ ವಿನಿಯೋಗಿಸಿದರೆ, ತೀರಾ ಅವಶ್ಯಕ ಎನಿಸುವ ಮೂಲಸೌಕರ್ಯಗಳನ್ನು ನಾವು ಸಂಪಾದಿಸಿಕೊಳ್ಳುವುದು ಯಾವಾಗಾ? ತೀರಾ ಬೇಕೇ ಬೇಕೆನಿಸುವ ಸಂದರ್ಭದಲ್ಲಿ ಯಾರ ಬಳಿಯಾದರೂ ಕೇಳಿಯಾದರೂ ಪಡೆದುಕೊಳ್ಳಬಹುದೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಹುಟ್ಟಿಕೊಂಡದ್ದೇ ಆಶೀರ್ವಾದ್ ಲಕ್ಕಿ ಸ್ಕೀಂ.
ಬಂಧುಗಳೇ, ನಾವೆಲ್ಲಾ ಹಾಗೋ ಹೀಗೋ ಜೀವನವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇವಷ್ಟೇ. ನಿಜವಾಗಿ ಹೇಳಬೇಕೆಂದರೆ, ಇವೆಲ್ಲಾ ತೋರಿಕೆಗಷ್ಟೇ. ಹಾಗೇ ಜೀವನವನ್ನು ನಿಭಾಯಿಸಿಕೊಂಡು ಹೋಗಲು ಎಷ್ಟು ಕಷ್ಟ ಪಡುತ್ತಿದ್ದೇವೆ ಎನ್ನುವುದು ನಮಗಷ್ಟೇ ತಿಳಿದಿರುವುದು. ಇದು ನಿಜ ತಾನೇ?
ಈ ಎಲ್ಲಾ ಜಂಜಾಟಗಳ ನಡುವೆ, ನಮ್ಮ ಭವಿಷ್ಯದ ಬಗ್ಗೆ ಸ್ವಲ್ಪ ಹೊತ್ತು ಆಲೋಚಿಸುವುದು ತೀರಾ ಅವಶ್ಯಕ. ತಿಂಗಳ ದುಡಿಮೆಯಲ್ಲಿ ನಾಳೆಗೆಂದು ನಾವೆಷ್ಟು ಉಳಿಕೆ ಮಾಡುತ್ತಿದ್ದೇವೆ ಎಂದು ಕೇಳಿದರೆ – ಅಡ್ಡಡ್ಡ ತಲೆಯಾಡಿಸುವವರೇ ಹೆಚ್ಚು. ಕನಿಷ್ಠ ತಿಂಗಳಲ್ಲಿ 1 ಸಾವಿರ ರೂಪಾಯಿಯನ್ನು ಉಳಿಸುವುದು ಕಷ್ಟವಾಗಲಾರದು ಎನ್ನುವುದು ನಮ್ಮ ಅನಿಸಿಕೆ.
ಹಾಗೇ ನೀವು ಉಳಿಸಿ, ಆಶೀರ್ವಾದ್ ಲಕ್ಕಿ ಗಿಫ್ಟ್ ಸ್ಕೀಂನಲ್ಲಿ ಹೂಡುವ ಹಣವೇ ನಿಮ್ಮ ನಾಳೆಗಳ ಬೇಡಿಕೆಯನ್ನು ಪೂರೈಸಲಿವೆ ಎನ್ನುವುದನ್ನು ನೀವು ಊಹಿಸಬಲ್ಲಿರಾ?
ನೀವು ನೀಡುವ 1 ಸಾವಿರ ರೂ.ಗೆ ಕಡಿಮೆಯಾಗದಂತಹ ವಸ್ತುಗಳನ್ನು ನಿಮ್ಮ ಕೈಗಿಡುವ ಜವಾಬ್ದಾರಿಯನ್ನು ನಮ್ಮ ತಂಡ ವಹಿಸಿಕೊಂಡಿದೆ. ಇದೊಂದು ಸಾಮಾಜಿಕ ಸೇವೆಯ ಭಾಗ. ನೀವು ನೀಡುವ 1 ಸಾವಿರ ರೂ.ನಿಂದ ನೀವು ಮನೆಯನ್ನು ಗಳಿಸಿಕೊಳ್ಳಬಹುದು ಅಥವಾ ಇನ್ನಾವುದೋ ಅವಶ್ಯಕ ವಸ್ತುಗಳನ್ನು ಗಿಫ್ಟ್ ಆಗಿ ಪಡೆದುಕೊಳ್ಳಬಹುದು.
ಈಗಾಗಲೇ ಒಂದು ಸ್ಕೀಂ ಅನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಹೆಗ್ಗಳಿಕೆ ನಮ್ಮದು. ಅದೇ ಯಶಸ್ಸಿನಲ್ಲಿ ಇನ್ನೊಂದು ಸ್ಕೀಂ ಅನ್ನು ಪ್ರಾರಂಭಿಸಿದ್ದೇವೆ. ಇದು ಎರಡನೇ ಸ್ಕೀಂ. ಇಲ್ಲಿ ಹೂಡಿಕೆ ಮಾಡುವ ಎಲ್ಲರೂ ಅದೃಷ್ಟವಂತರೇ. ಆದರೆ ಕೆಲವರು ಮಾತ್ರ ಹೆಚ್ಚು ಅದೃಷ್ಟವಂತರು.