ಗೆಳೆಯರ ಬಳಗ ಕೊಡಿಮಾರು ಅಬೀರ ವತಿಯಿಂದ 15ನೇ ವರ್ಷದ ದೀಪಾವಳಿ ಕ್ರೀಡಾ ಕೂಟ
ಗೆಳೆಯರ ಬಳಗ ಕೊಡಿಮಾರು ಅಬೀರ ವತಿಯಿಂದ 15ನೇ ವರ್ಷದ ದೀಪಾವಳಿ ಕ್ರೀಡಾ ಕೂಟ
ಕಡಬ ತಾಲೂಕು ಬೆಳಂದೂರು ಗ್ರಾಮದ ಗೆಳೆಯರ ಬಳಗ (ರಿ )ಕೊಡಿಮಾರು ಅಬೀರ ಇದರ ವತಿಯಿಂದ 15ನೇ ವರ್ಷದ ದೀಪಾವಳಿ ಕ್ರೀಡಾ ಕೂಟ ದಿನಾಂಕ 31-10-2024ನೇ ಗುರುವಾರ ಕೊಡಿಮಾರು ಶ್ರೀ ಉಳ್ಳಾಕುಲು ಮತ್ತು ವ್ಯಾಘ್ರ ಚಾಮುಂಡಿ ದೈವಸ್ಥಾನದ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಿವರಾಮ ಉಪಾಧ್ಯಾಯ ಕಲ್ಪಡ ಮಾಡಲಿದ್ದು ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ಬಾಲಚಂದ್ರ ಅಬೀರ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಈಶ್ವರ ಚಂದ್ರ ಭಟ್ ಅರ್ಚಕರು ಅಗಳಿ ಸದಾಶಿವ ದೇವಸ್ಥಾನ, ಶ್ರೀನಿಧಿ ಆಚಾರ್ಯ ಮೇನೇಜರ್ ಕಾಣಿಯೂರು ಮಠ,ಉದಯ ರೈ ಮಾದೋಡಿ ಅಧ್ಯಕ್ಷರು ಕೊಡಿಮಾರು ದೈವಸ್ಥಾನ ಅಭಿವೃದ್ಧಿ ಸಮಿತಿ ಇವರುಗಳು ಭಾಗವಹಿಸಲಿದ್ದಾರೆ.ಈ ದಿನ ಹಲವು ಕ್ರೀಡಾ ಸ್ಪರ್ಧೆಗಳು ನಡೆದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ.