• 4 ನವೆಂಬರ್ 2024

ಕಡಬ: ಕೊಂಬಾರು ಪ್ರಾಥಮಿಕ ಶಾಲೆಯಲ್ಲಿ ಮರ್ದಾಳ ಶೌರ್ಯ ಘಟಕದಿಂದ ಶ್ರಮದಾನ.

 ಕಡಬ: ಕೊಂಬಾರು ಪ್ರಾಥಮಿಕ ಶಾಲೆಯಲ್ಲಿ ಮರ್ದಾಳ ಶೌರ್ಯ ಘಟಕದಿಂದ ಶ್ರಮದಾನ.
Digiqole Ad

ಕಡಬ: ಕೊಂಬಾರು ಪ್ರಾಥಮಿಕ ಶಾಲೆಯಲ್ಲಿ ಮರ್ದಾಳ ಶೌರ್ಯ ಘಟಕದಿಂದ ಶ್ರಮದಾನ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಮರ್ದಾಳ ಶೌರ್ಯ ಘಟಕದ ಸ್ವಯಂ ಸೇವಕರಿಂದ ಕೊಂಬಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ನಡೆಯಿತು.
ಮರ್ದಾಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಭೆಯಲ್ಲಿ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆಯವರು ಮಾತನಾಡಿ ಶೌರ್ಯ ಘಟಕದಿಂದ ತಿಂಗಳಿಗೊಂದು ಸಾಮಾಜಿಕ ಸೇವೆಗಳನ್ನು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಸುತ್ತಿದ್ದು ಕೊಂಬಾರು ಹಿರಿಯ ಪ್ರಾಥಮಿಕ ಶಾಲೆ ಆವರಣ ಹಾಗೂ ಕ್ರೀಡಾಂಗಣ ಸ್ವಚ್ಚತೆಯ ಶ್ರಮದಾನ ಇಂದು ನಡೆಸಲಾಗಿದೆ.
ಮುಂದಿನ ತಿಂಗಳಿನ ಸಾಮಾಜಿಕ ಸೇವೆಯನ್ನು ನಡೆಸುವ ಪೂರ್ವದಲ್ಲಿ ಗುರುತಿಸಲ್ಪಟ್ಟ ಶ್ರಮದಾನದ ಬಗ್ಗೆ ಮನವಿ ಪಡೆದು ಪೂರ್ವ ತಯಾರಿ ಮಾಡಿಕೊಳ್ಳುವುದು. ಪ್ರತೀ ಸ್ವಯಂ ಸೇವಕರುಗಳು ತಮ್ಮ ಗ್ರಾಮಗಳಲ್ಲಿ ಬಡ ಕುಟುಂಬವನ್ನು ಗುರುತಿಸಿ ಮೂಲಸೌಕರ್ಯ ಒದಗಿಸುವ ಬಗ್ಗೆ ಮತ್ತು ಶ್ರಮದಾನ ಮಾಡುವ ಬಗ್ಗೆ ಹೆಚ್ಚು ಆಸಕ್ತಿ ವಹಿಸಿಕೊಳ್ಳುವುದು ಹಾಗೂ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯದ ವಿಶೇಷ ಕಾರ್ಯಕ್ರಮಗಳಿಗೆ ಭಾಗವಹಿಸಿ ಸಹಕಾರ ನೀಡುವುದು , ಧಾರ್ಮಿಕ ಶ್ರದ್ಧಾ ಕೇಂದ್ರ ದಲ್ಲಿ ನಡೆಸುವ ಶ್ರಮದಾನದ ಬಗ್ಗೆ ಅನುಮತಿಯನ್ನು ಮುಂಚಿತವಾಗಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಘಟಕ ಪ್ರತಿನಿಧಿ ಭವಾನಿ ಶಂಕರ್ˌ ಘಟಕ ಸಂಯೋಜಕಿ ಜ್ಞಾನ ಸೇಲ್ವೀ, ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷರಾದ ರೇಗಪ್ಪ ಹಾಗೂ ಶಾಲಾಭಿವೃಧ್ಧಿ ಸಮಿತಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು.
ಶ್ರಮದಾನ ನಡೆಸಿರುವ ಬಗ್ಗೆ ಕೊಂಬಾರು ಒಕ್ಕೂಟದ ಅಧ್ಯಕ್ಷರಾದ ಧರ್ಮಪಾಲ ಗೌಡ ಕೋಲ್ಪೇ ಎಲ್ಲರಿಗೂ ಧನ್ಯವಾದ ನೀಡಿದರು.

Digiqole Ad

ಈ ಸುದ್ದಿಗಳನ್ನೂ ಓದಿ