• 3 ನವೆಂಬರ್ 2024

ಪ್ಲಾಸ್ಟಿಕ್‌ ಮುಕ್ತ ಮನೆ ಘೋಷಣೆಯಾಗಲಿ

 ಪ್ಲಾಸ್ಟಿಕ್‌ ಮುಕ್ತ ಮನೆ ಘೋಷಣೆಯಾಗಲಿ
Digiqole Ad

ಪ್ಲಾಸ್ಟಿಕ್‌ ಮುಕ್ತ ಮನೆ ಘೋಷಣೆಯಾಗಲಿ

 

ಪ್ಲಾಸ್ಟಿಕ್‌ ತ್ಯಾಜ್ಯವಿರಲಿ, ಅಲ್ಲಲ್ಲಿ ಎಸೆಯುವ ಯಾವುದೇ ಕಸವಿರಲಿ ಅದರ ಮೂಲ ಉತ್ಪಾದಕರು, ಪ್ರಸರಣಕಾರರು ಜನರು. ಅದನ್ನು ನಿಯಂತ್ರಿಸುವ ಶಕ್ತಿ ಇರುವುದು ಕೂಡಾ ಜನರಲ್ಲೇ. ಆದರೆ, ಅವರಿಗೆ ಅವರ ಶಕ್ತಿಯ ಅರಿವು ಮೂಡಿಸುವ ಕೆಲಸವನ್ನು ಮಾಡುವುದು ನಮ್ಮ, ಆಡಳಿತದ ಜವಾಬ್ದಾರಿ. ಇದೊಂದು ಕೆಲಸ ಆಯಿತೆಂದರೆ ಪ್ಲಾಸ್ಟಿಕ್‌ ನಿಯಂತ್ರಣ ಅತ್ಯಂತ ಸುಲಭ. ನಾನು ಪ್ಲಾಸ್ಟಿಕ್‌ ಬಳಕೆಯನ್ನು ನಿಯಂತ್ರಿಸಿಕೊಳ್ಳುತ್ತೇನೆ, ನನ್ನ ಮನೆಯನ್ನೂ ಪ್ಲಾಸ್ಟಿಕ್‌ ಮುಕ್ತಗೊಳಿಸುತ್ತೇನೆ ಎನ್ನುವ ಸ್ವಯಂಘೋಷಣೆಯನ್ನು ಪ್ರತಿಯೊಬ್ಬರೂ ಮಾಡಿಕೊಂಡರೆ ಜಗತ್ತಿನ ಅತಿ ದೊಡ್ಡ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಇದು ಬಯಲುಶೌಚ ಮುಕ್ತ ಗ್ರಾಮ, ಬಯಲು ಕಸ ಮುಕ್ತ ಗ್ರಾಮ, ಪ್ಲಾಸ್ಟಿಕ್‌ ನಿರ್ಮೂಲನೆ ಕುರಿತು ಕಳೆದೆರಡು ದಶಕಗಳಿಂದ ಸ್ವಯಂ ಸೇವೆ ಮಾಡುತ್ತಾ ಬಂದಿರುವ ಜನಶಿಕ್ಷಣ ಟ್ರಸ್ಟ್‌ ನಿರ್ದೇಶಕ ಎನ್‌.ಶೀನ ಶೆಟ್ಟಿ ಅವರ ಖಚಿತ ನುಡಿಗಳು.
ಗ್ರಾಮಗಳಲ್ಲಿ, ಅರೆನಗರಗಳಲ್ಲಿ ಎರಡು ದಶಕ ಹಿಂದೆಯೇ ಪ್ಲಾಸ್ಟಿಕ್‌ ನಿರ್ಮೂಲನೆಗಾಗಿ ಜನರೇ ಮನೆಯಿಂದ ಪ್ಲಾಸ್ಟಿಕ್‌ ಕಸವನ್ನು ಶುಚಿಗೊಳಿಸಿ, ಗ್ರಾಮ ಪಂಚಾಯತ್‌ ಆವರಣದಲ್ಲಿ ಪ್ಲಾಸ್ಟಿಕ್‌ ಕುಟೀರಗಳಲ್ಲಿ ಪ್ಲಾಸ್ಟಿಕ್‌ ಪರ್ವತ ನಿರ್ಮಿಸುವ ಪರಿಕಲ್ಪನೆ ಮೂಲಕ ಜಾಗೃತಿ ಮೂಡಿಸಿದವರು ಶೀನ ಶೆಟ್ಟಿ.
ಉದಯವಾಣಿ-ಸುದಿನದಲ್ಲಿ ಪ್ರಕಟವಾಗುತ್ತಿರುವ ‘ಪ್ಲಾಸ್ಟಿಕ್‌ ಚಕ್ರವ್ಯೂಹ’ ಸರಣಿಯ ಎಲ್ಲ ವರದಿಗಳನ್ನು ಗಮನಿಸಿ ದ್ದಷ್ಟೇ ಅಲ್ಲ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮಾತ್ರವಲ್ಲ, ರಾಜ್ಯ ಸರಕಾರದ ಗಮನಕ್ಕೂ ತಲುಪಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ