ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಹಯೋಗದಿಂದ ಸಹಾಯಹಸ್ತ…
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಹಯೋಗದಿಂದ ಸಹಾಯಹಸ್ತ…
ಇತ್ತೀಚೆಗೆ ಸ್ವರ್ಗಸ್ಥರಾದ ಗಣೇಶ್ ಭಾಗ್ ( ನೆಹರುನಗರ) ನಿವಾಸಿ ಶ್ರೀಮತಿ ಜಯಂತಿ ಅವರ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಹಯೋಗದಿಂದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕುಂಜೂರು ಪಂಜ ನಿವಾಸಿ ತಿಮ್ಮಪ್ಪ ನಾಯ್ಕ ಅವರ ಪುತ್ರ ಚೇತಕ್ ಅವರಿಗೆ ಸುಮಾರು 20 ಸಾವಿರಮೌಲ್ಯದ ವೈದ್ಯಕೀಯ ವಿನ್ಯಾಸದ hospital bed ನ್ನು ಹಸ್ತಾಂತರಿಸಲಾಯಿತು.
ಚೇತಕ್ ಅವರು ಪ್ರಸ್ತುತ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ
ಈ ಸಂಧರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಶ್ರೀಯುತ ಅರುಣ್ ಕುಮಾರ್ ಪುತ್ತಿಲ, ದಿವಂಗತ ಜಯಂತಿ ಅವರ ಪುತ್ರ ಉಮೇಶ್ , ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ರೈ ಕೆದಂಬಾಡಿ ಮಠ ಹಾಗು, ಹರೀಶ್ ಮರುವಾಳ ಮತ್ತು ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು