ಬಾಲ್ಯ ಕಂಡ ದೀಪಾವಳಿ – 🖊ಅಮಿತಾ ಮಂಜು
ಬಾಲ್ಯ ಕಂಡ ದೀಪಾವಳಿ – 🖊ಅಮಿತಾ ಮಂಜು
ದೀಪಾವಳಿ ಹಬ್ಬವೆಂದರೆ ಎಲ್ಲರಿಗೂ ಖುಷಿ ಬಾಲ್ಯದ ದಿನಗಳಲ್ಲಿ ದೀಪಾವಳಿ ಹಬ್ಬವನ್ನು ಕಳೆದ ಒಂದು ಸಣ್ಣ ನೆನಪಿಗೆ ಮುನ್ನುಡಿ ಬರೆಯುವ ಮನಸ್ಸಾಗಿದೆ ಅಪ್ಪ ಅಮ್ಮ ನಾಲ್ಕು ಜನ ಹೆಣ್ಣು ಮಕ್ಕಳನ್ನು ಒಳಗೊಂಡ ಒಂದು ಪುಟ್ಟ ಸಂಸಾರ ಸುತ್ತಲೂ ತೆಂಗಿನ ಮರ, ಅಡಿಕೆ ಮರ, ಹಲಸಿನ, ಮಾವಿನ ಮರ ಗಳಿಂದ ಕೂಡಿದ ಒಂದು ಹೆಚ್ಚು ಹಸುರಿನ ಮಧ್ಯದಲ್ಲಿ ನಮ್ಮ ಮುಳಿಹುಲ್ಲಿನ ದೊಡ್ಡ ಮನೆ ಬಹುಶಃ ಗ್ರಾಮದಲ್ಲಿ ಮುಳಿಹುಲ್ಲಿನ ಮನೆಯೊಂದು ಇದ್ದರೆ ಅದು ನಮ್ಮ ಮನೆ ಮಾತ್ರ ಸಂಜೆ ಆದರೆ ಸಾಕು ಎಲ್ಲೆಡೆ ಪಟಾಕಿಗಳ ಸದ್ದು ಆದರೆ ನಮಗೆ ಭಯ ಪಟಾಕಿ ಹೊಡೆದರೆ ಎಲ್ಲಿ ನಮ್ಮ ಮನೆ ಸುಟ್ಟುಹೋದಿತು ಏಂದು ಪಾಪ ಅಮ್ಮ 10 ರೂಂ ಕ್ಯಾಂಡಲ್ ತಂದು ಮಣ್ಣಿನ ತುಳಸಿ ಗಿಡಕ್ಕೆ ಹಚ್ಚುವ ದೃಶ್ಯ ಕಣ್ಣಿಗೆ ಈಗಲೂ ಕಟ್ಟಿದಂತಿದೆ ಎಲ್ಲರ ಮನೆಗೆ ಗೂಡುದೀಪದ ಆಗಮನ
ಗೂಡು ದೀಪದೊಳಗೆ ಹಾಕಲು ವಿದ್ಯುತ್ ದೀಪದ ಅಲಂಕಾರ
ನಮ್ಮ ಮನೆಗೆ ಚಿಮಣಿ ದೀಪವೇ ಅಲಂಕಾರ
ಕಣ್ಣುಮುಚ್ಚಿ ತೆರೆದು ನೋಡಿದರೆ ಬಾಲ್ಯವೇ ಕಳೆದು ಹೋಯಿತು
ಹುಳಿಮುಲ್ಲಿನ ಮನೆ ಹೆಂಚಿನ ಮನೆಯಾಯಿತು
ಕ್ಯಾಂಡಲ್ ಬದಲಿಗೆ ಮಣ್ಣಿನ ಹಣತೆ ಬಂತು
ನಿಮಗೂ ಖುಷಿ
ಸಣ್ಣ ಸಣ್ಣ ಪಟಾಕಿಗಳ ಆಗಮನ
ಪಟಾಕಿ ಹಚ್ಚಲು ಗೊತ್ತಿಲ್ಲ
ಸೂರ್ಯ ಮುಳುಗುವ ಹೊತ್ತಿಗೆ ದೀಪ ಹಚ್ಚಲು ತಾ ಮುಂದು ನಾ ಮುಂದು ಸಣ್ಣ ಜಗಳ ಅಕ್ಕ-ತಂಗಿಯರಲ್ಲಿ
ವರ್ಷ ಕಳೆಯಿತು ಬಾಲ್ಯ ಕಳೆದು ಹೋಯಿತು ಯೌವನ ಬಂತು ಮದುವೆ ಎಂಬ ಮೂರಕ್ಷರ ನಾಲ್ಕು ಜನ ಹೆಣ್ಣು ಮಕ್ಕಳ ಹಣೆಯಲ್ಲಿ ಬರೆದಂತೆ ನಡೆದೇ ಹೋಯಿತು ದೀಪಾವಳಿ ಹಬ್ಬದ ಆಚರಣೆ ನಾಲ್ಕು ಜನ ಹೆಣ್ಣು ಮಕ್ಕಳಿಗೂ ಅದ್ಧೂರಿಯಲ್ಲಿ ಆಚರಣೆ ಆಗುವಂತಹ ಭಾಗ್ಯ ಒಳಿದು ಬಂತು
ದೀಪಾವಳಿ ಹಬ್ಬದ ಮೊದಲ ದಿನ
ಶುಭಾಶಯ ಕೋರುವ ಅಪ್ಪ
ಪರ್ಬಗ್ ಜೊಕುಲೆಗ್ ದಾದ ಮಂತ ಅಡ್ಯ ಎಂದು ಕೇಳುವ ಅಮ್ಮ ಬಹುಶಃ ಇದಕ್ಕಿಂತ ದೊಡ್ಡ ಖುಷಿ ಬದುಕಿನಲ್ಲಿ ಬೇರೆನಿದೆ ಅನಿಸುತ್ತದೆ ಒಮ್ಮೊಮ್ಮೆ
ವಿದ್ಯೆ ಎಂಬ ಬಂಗಾರದಂತಹ ದೊಡ್ಡ ಕಾಣಿಕೆ
ಧೈರ್ಯ , ಸ್ವಾಭಿಮಾನ,ಪರಿಶ್ರಮ, ಪ್ರಾಮಾಣಿಕತೆ ಯು ದುಡಿಮೆ ಇವೆಲ್ಲವನ್ನೂ ಧಾರೆ ಎರೆದು ಅಪ್ಪ -ಅಮ್ಮನಿಗೆ ಸದಾ ಚಿರಋಣಿ ಪಟಾಕಿಯ ಶಬ್ಧ ಕೇಳಿದೊಡನೆ ಮತ್ತೆ ಮತ್ತೆ ಮರುಕಳಿಸುವ ಬಾಲ್ಯ ದೀಪಾವಳಿ ಹಬ್ಬ ಎಲ್ಲರ ಬಾಳನ್ನು ಬೆಳಗಿಸಲಿ ಎಂಬ ಶುಭ ಆಶಯದೊಂದಿಗೆ ದೀಪಾವಳಿ ಹಬ್ಬದ ಬಾಲ್ಯದ ನೆನಪಿಗೆ ಚುಕ್ಕಿ ಇಡುವ ಸಮಯ.