ಬಹುಮುಖ ಪ್ರತಿಭಾ ಸಂಪನ್ನೆ..ವಸಂತಿ ಟಿ. ನಿಡ್ಲೆ….ಅವರಿಗೆ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಬಹುಮುಖ ಪ್ರತಿಭಾ ಸಂಪನ್ನೆ..ವಸಂತಿ ಟಿ. ನಿಡ್ಲೆ….ಅವರಿಗೆ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಕಲೆ, ಸಾಹಿತ್ಯ, ಕ್ರೀಡೆ, ಶಿಕ್ಷಣ ಕ್ಷೇತ್ರ ದಲ್ಲಿ ಸಾಧನೆ ಮೆರೆದಿರುವ ಬಹುಮುಖ ಪ್ರತಿಭಾ ಸಂಪನ್ನೆ
ವಸಂತಿ ಟಿ. ನಿಡ್ಲೆ….
ಅವರ ಅಪ್ರತಿಮ ಸಾಧನೆಯನ್ನು ಗುರುತಿಸಿ “”ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ” 2024 ಎಂಬ ಗೆ ಆಯ್ಕೆಮಾಡಲಾಗಿದೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿ,ಪ್ರವೃತ್ತಿಯಲ್ಲಿ ಕವಯತ್ರಿ, ಲೇಖಕಿ, ಯಕ್ಷಗಾನ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಇವರು, ಯಕ್ಷಗಾನ, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಕೃಷಿ, ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮೆರೆದಿದ್ದು
ಇದುವರೆಗೆ 8ರಾಜ್ಯ ಪ್ರಶಸ್ತಿ 1 ತಾಲೂಕು ಮಟ್ಟದ “ಯುವಸಾಧಕಿ “ಎಂಬ ಪ್ರಶಸ್ತಿ1ರಾಷ್ಟ್ರ ಪ್ರಶಸ್ತಿ ಪಡೆದ ಬಹುಮುಖ ಪ್ರತಿಭಾಸಂಪನ್ನೆ.ಅತೀ ಕಿರಿಯ ವಯಸ್ಸಿನಲ್ಲಿ 10ಪ್ರಶಸ್ತಿ ಗಳನ್ನು ಮುಡಿಗೇರಿಕೊಂಡ ಅಪ್ರತಿಮ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ . ತಾವು ಸೇವೆ ಸಲ್ಲಿಸುತ್ತಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಗದ್ದೆ ಕೃಷಿ ಮಾಡಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಲ್ಲದೆ, ಅದೇ ಶಾಲಾ ಜಮೀನಿನಲ್ಲಿ ದಾನಿಗಳ ಸಹಾಯದಿಂದ ಅಡಿಕೆ ಕೃಷಿ ಮಾಡಿ ಊರ ಪರವೂರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕನಸಿನ ಮಾತಾಗಿದ್ದ ಯಕ್ಷಗಾನವನ್ನು ಮಕ್ಕಳಿಗೆ ತರಬೇತುಗೊಳಿಸಿ ಯಕ್ಷಗಾನ ಪ್ರದರ್ಶನ ಮಾಡಿಸಿದ್ದಾರೆ.ಅಪ್ರತಿಮ ಸಾಧಕಿ, ಬಹುಮುಖ ಪ್ರತಿಭಾ ಸಂಪನ್ನೆ ವಸಂತಿ ಟಿ. ನಿಡ್ಲೆ ಅವರು ಸಾಹಿತ್ಯ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದು ಹಲವಾರು ನಿಯತಕಾಲಿಕೆಗಳಲ್ಲಿ ಇವರ ಕಥೆ, ಕವನ ಲೇಖನಗಳು ಪ್ರಕಟಗೊಂಡಿವೆ. ಯಕ್ಷಗಾನವನ್ನು ಯೋಗೀಶ್ ಶರ್ಮ ಅವರಲ್ಲಿ, ಸಂಗೀತವನ್ನು ವಿಜಯಲಕ್ಮಿ ಅವರಲ್ಲಿ ಅಭ್ಯಾಸಮಾಡಿದ್ದು ಪ್ರಸ್ತುತ ಮೋಹನ ಬೈಪಾಡಿತ್ತಾಯ ಅವರಲ್ಲಿ ಭಾಗವತಿಕೆ ಅಭ್ಯಾಸ ಮಾಡುತ್ತಿದ್ದಾರೆ.ನಾಳೆ ಮಂಗಳೂರಿನಲ್ಲಿ ನಡೆಯುವ ಜಿಲ್ಲಾ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.