ಕೋಟೆ ಚಾವಡಿ ಶ್ರೀ ದೂಮಾವತಿ ದೀಪಾವಳಿ ನೇಮೋತ್ಸವ
ಕೋಟೆ ಚಾವಡಿ ಶ್ರೀ ದೂಮಾವತಿ ದೀಪಾವಳಿ ನೇಮೋತ್ಸವ
ಕಾಸರಗೋಡು :ಕಾಸರಗೋಡು ಕೋಟೆ ಚಾವಡಿ ಶ್ರೀ ದೂಮಾವತಿ, “ದೀಪಾವಳಿ ನೇಮೋತ್ಸವ “ವಿಜೃಂಭಣೆಯಿಂದ ನಡೆಯಿತು. ನೆಲ್ಲಿಕುಂಜೆ ಪಳ್ಳದಕೊಟ್ಯ ಶ್ರೀ ದೂಮಾವತಿ ದೈವಸ್ಥಾನ ದಿಂದ ಬಂಡಾರ ಭವ್ಯ ಮೆರವಣಿಗೆ ಯ ಮೂಲಕ ಆಗಮಿಸಿ, ಕೋಟೆ ಚಾವಡಿಯಲ್ಲಿ ದೈವ ನೇಮ ನಡೆಯಿತು ಕಾಸರಗೋಡು ಕೋಟೆ ರಾಮರಾಜ ಕ್ಷತ್ರಿಯ ಪರಂಪರೆಯ ನಾಯಕರ ಮನೆ ವಂಶಸ್ಥರ ಮುಂದಾಳತ್ವ ದಲ್ಲಿ, ಕೋಟೆ ಚಾವಡಿ ಶ್ರೀ ಧೂಮಾವತಿ ಉತ್ಸವ ಸಮಿತಿ ಯ ನೇತೃತ್ವದಲ್ಲಿ ದೈವಕೋಲ, ಅನ್ನಸಂತರ್ಪಣೆ, ಪ್ರಸಾದವಿತರಣೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು. ಸಮಿತಿ ಅಧ್ಯಕ್ಷರಾದ ನವೀನ್ ನಾಯಕ್ ನಾಗರಕಟ್ಟೆ, ಕಾರ್ಯದರ್ಶಿ ಮೋಹನ್ದಾಸ್, ಮೋನ, ಕೋಶಾಧಿಕಾರಿ ವಾಮನ್ ರಾವ್ ಬೇಕಲ್, ಪ್ರದೀಪ್ ನಾಯ್ಕ್ ನಾಗರಕಟ್ಟೆ,ಮುಂತಾದವರು ನೇತೃತ್ವ ವಹಿಸಿದರು.