ಕಳೆದು ಹೋದ ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಗೌರವಾಧ್ಯಕ್ಸರು
ಕಳೆದು ಹೋದ ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಗೌರವಾಧ್ಯಕ್ಸರು
ಇಂದು ಪೆರ್ಲದಿಂದ ಪುತ್ತೂರಿಗೆ ಬರುವ ದಾರಿ ಮದ್ಯೆ ಪರ್ಸ್ ಒಂದು ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಗೌರವಾದ್ಯಕ್ಸರಾದ ಶ್ರೀಯುತ ಉದಯ ಅರ್ಜುನಗುಳಿ ಇವರಿಗೆ ದೊರಕಿರುತ್ತದೆ. ಅದರಲ್ಲಿ 10000 ಕ್ಕಿಂತ ಹೆಚ್ಚು ನಗದು, ಎ. ಟಿ. ಮ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಇನ್ನಿತರ ಅಗತ್ಯ ವಸ್ತುಗಳು ಇರುವುದನ್ನು ಕಂಡು ತಕ್ಷಣ ಆಧಾರ್ ಕಾರ್ಡ್ ವಿಳಾಸವನ್ನು ಸಂಪರ್ಕ ಮಾಡಿದಾಗ ಅದು ಶ್ರೀಯುತ ರಾಧಾಕೃಷ್ಣ ಏನ್ಮಕಜೆ ಎಂಬವರಿಗೆ ಸೇರಿದ್ದನ್ನು ಮನವರಿಕೆ ಮಾಡಿಕೊಂಡು ಅವರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿರುತ್ತಾರೆ.ಶ್ರೀಯುತ ರಾಧಾಕೃಷ್ಣರು ಅಭಿನಂದನೆಗಳು ಸಲ್ಲಿಸಿರುತ್ತಾರೆ.