ಅರಿವು ಕೇಂದ್ರ ಬಲ್ನಾಡು ಬಿಳಿಯೂರು ಕಟ್ಟೆಯಲ್ಲಿ ಗೂಡು ದೀಪದ ತಯಾರಿ
ಅರಿವು ಕೇಂದ್ರ ಬಲ್ನಾಡು ಬಿಳಿಯೂರು ಕಟ್ಟೆಯಲ್ಲಿ ಗೂಡು ದೀಪದ ತಯಾರಿ:
ದೀಪಗಳ ಹಬ್ಬಕ್ಕೆ ನಾಡು ರಂಗೇರುತ್ತಿದೆ ಎಲ್ಲೆಲ್ಲೂ ದೀಪಾವಾಳಿಯ ತಯಾರಿ ಗೂಡು ದೀಪ, ವಿದ್ಯುತ್ ದೀಪ ಹಾಗೂ ಇನ್ನಿತರ ಅಲಂಕಾರಕ್ಕೆ ಬಳಸುವ ವಸ್ತುಗಳ ಖರೀದಿ ಹಾಗೂ ಮಾರಾಟ ಜೋರಾಗಿದೆ. ಬಗೆಬಗೆಯ ಗೂಡುದೀಪಗಳು ಗ್ರಾಹಕರನ್ನು ಸೆಳೆಯು ತ್ತಿದ್ದರೆ,ಅರಿವು ಕೇಂದ್ರ ಬಲ್ನಾಡು ಬಿಳಿಯೂರು ಕಟ್ಟೆಯಲ್ಲಿ ತಾವೇ ಗೂಡುದೀಪಗಳನ್ನು ತಯಾರಿಸಿ ಗಮನ ಸೆಳೆದಿದ್ದಾರೆ.
ಬಣ್ಣ ಬಣ್ಣದ ಕಾಗದಗಳನ್ನು ಬಳಸಿಕೊಂಡು ಅವುಗಳಿಂದ ಗೂಡುದೀಪಗಳನ್ನು ತಯಾರಿಸಿದ್ದಾರೆ
ಈ ಸಂದರ್ಭದಲ್ಲಿ ಪಿಡಿಓ ದೇವಪ್ಪ ಪಿ. ಆರ್, ಅಧ್ಯಕ್ಷರು ಪರಮೇಶ್ವರಿ ಭಟ್ ಬಬ್ಬಿಲಿ, ಕಾರ್ಯದರ್ಶಿ ಲಕ್ಷ್ಮಿ, ಸದಸ್ಯರಾದ ಚಂದ್ರಾವತಿ, ವಿನಯ, ಪಂಚಾಯತ್ ಸಿಬ್ಬಂದಿ, ಹಾಗೂ ಗ್ರಾಮ ಸಹಾಯಕರಾದ ಸಂಜೀವ ನಾಯ್ಕ, PLD ಬ್ಯಾಂಕ್ ನಿರ್ದೇಶಕರು ಕಿರಣ್ ಕುಮಾರ್ ರೈ ಗ್ರಂಥಾಲಯ ಮೇಲ್ವಿಚಾರಕರು ಸುಜಾತ, ಗ್ರಾಮಸ್ಥರು ಹಾಜರಿದ್ದರು