• 7 ಡಿಸೆಂಬರ್ 2024

ಕೊಡಿಮಾರು : ಹದಿನೈದನೇ ವರ್ಷದ ದೀಪಾವಳಿ ಕ್ರೀಡಾಕೂಟ ಸಮಾರೋಪ ಸಮಾರಂಭ

 ಕೊಡಿಮಾರು : ಹದಿನೈದನೇ ವರ್ಷದ ದೀಪಾವಳಿ ಕ್ರೀಡಾಕೂಟ ಸಮಾರೋಪ ಸಮಾರಂಭ
Digiqole Ad

ಕೊಡಿಮಾರು : ಹದಿನೈದನೇ ವರ್ಷದ ದೀಪಾವಳಿ ಕ್ರೀಡಾಕೂಟ ಸಮಾರೋಪ ಸಮಾರಂಭ

ದೀಪಾವಳಿ ಹಬ್ಬ ದೀಪಗಳ ಹಬ್ಬ, ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗುವ ಹಬ್ಬ ಇಂತಹ ದೀಪಾವಳಿ ಹಬ್ಬದಲ್ಲಿ ಹಿಂದುಗಳಾದ ನಾವೆಲ್ಲ ಒಂದಾಗಿ ಭಾಗವಹಿಸುವುದರ ಮೂಲಕ ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಕಟ್ಟುಪಾಡುಗಳು, ರೀತಿ ನೀತಿಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮಾಡಬೇಕು.ನಮ್ಮಲ್ಲಿ ಯಾವುದೇ ರೀತಿಯ ಅಭಿಪ್ರಾಯ ಭೇದಗಳು ಬಂದರೂ ಹಿಂದೂಗಳಾದ ನಾವೆಲ್ಲ ಒಂದಾಗಿ ಇರಬೇಕು.ಹಾಗದಾಗ ಮಾತ್ರ ದೀಪಾವಳಿಯ ದೀಪದಲ್ಲಿ ನಮ್ಮ ಹಿಂದೂ ಸಮಾಜ ಮತ್ತಷ್ಟು ಬೆಳಗಲು ಸಾಧ್ಯವಾಗುತ್ತದೆ ಎಂದು ಅಗಳಿ ಸದಾಶಿವ ದೇವಸ್ಥಾನದ ಅರ್ಚಕರಾದ ಈಶ್ವರ ಚಂದ್ರ ಭಟ್ ರವರು ಹೇಳಿದರು . ಅವರು ಗೆಳೆಯರ ಬಳಗ (ರಿ) ಕೊಡಿಮಾರು ಅಬೀರ ಇದರ ವತಿಯಿಂದ ಕೊಡಿಮಾರಿನಲ್ಲಿ ನಡೆದ ಹದಿನೈದನೇ ವರ್ಷದ ದೀಪಾವಳಿ ಕ್ರೀಡಾಕೂಟದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷರಾದ ಬಾಲಚಂದ್ರ ಅಬೀರ ವಹಿಸಿದ್ದರು. ವೇದಿಕೆಯಲ್ಲಿ ಕಾಣಿಯೂರು ಮಠದ ಮೇನೇಜರ್ ಶ್ರೀನಿಧಿ ಆಚಾರ್ಯ, ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಅಶ್ಲೇಷ್ ಮಿಪಾಲು ಉಪಸ್ಥಿತರಿದ್ದರು. ಜಯಂತ ಅಬೀರ ಸ್ವಾಗತಿಸಿ ಗೆಳೆಯರ ಬಳಗದ ಗೌರವ ಸಲಹೆಗಾರರಾದ ಪ್ರಮೋದ್ ನೀರಜರಿ ವಂದಿಸಿದರು. ಗೆಳೆಯರ ಬಳಗದ ಗೌರವ ಸಲಹೆಗಾರಾರದ ವಸಂತ ರೈ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಕೂಟದ ಉದ್ಘಾಟನೆಯನ್ನು ಶ್ರೀ ಶಿವರಾಮ ಉಪಾಧ್ಯಾಯ ಕಲ್ಪಡ ನೇರವೇರಿಸಿದರು.

ಉದ್ಘಾಟನ ಸಮಾರಂಭದ ವೇದಿಕೆಯಲ್ಲಿ ಕೊಡಿಮಾರು ದೈವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ ರೈ ಮಾದೋಡಿ,ಕೊಡಿಮಾರು ದೈವಸ್ಥಾನದ ಸೇವಾಕರ್ತರಾದ ವಿಷ್ಣು ಗೌಡ ಅಬೀರ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳಂದೂರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ವೇಣುಗೋಪಾಲ ಕಳುವಾಜೆ , ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ,ಗೆಳೆಯರ ಬಳಗದ ಅಧ್ಯಕ್ಷರಾದ ಬಾಲಚಂದ್ರ ಅಬೀರ, ಕಾರ್ಯದರ್ಶಿ ಶ್ರೀನಿತ್ ಮಿಪಾಲು ಉಪಸ್ಥಿತರಿದ್ದರು. ಕ್ರೀಡಾ ಕೂಟದ ಉದ್ಘಾಟನೆಯ ನಂತರ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

Digiqole Ad

ಈ ಸುದ್ದಿಗಳನ್ನೂ ಓದಿ