ಉಪ್ಪಿನಂಗಡಿ : ಸರ್ಕಾರಿ ಕಾಲೇಜು ವಿದ್ಯಾರ್ಥಿನಿ ಮೃತ್ಯು:
ಉಪ್ಪಿನಂಗಡಿ : ಸರ್ಕಾರಿ ಕಾಲೇಜು ವಿದ್ಯಾರ್ಥಿನಿ ಮೃತ್ಯು:
ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯೋರ್ವರು ಮೃತಪಟ್ಟ ಘಟನೆ ಇಂದು ನಡೆದಿದೆ. ಕೊಕ್ಕಡದ ಅಣ್ಣಿಂಗೇರಿ ನಿವಾಸಿ ಪ್ರಿಯಾಂಕ ಡಿಸೋಜಾ (19) ಮೃತಪಟ್ಟ ವಿದ್ಯಾರ್ಥಿನಿ. ಕಾಲೇಜಿಗೆ ಪ್ರವೇಶಾತಿ ಪಡೆದ ನಂತರ ಕೆಲ ದಿನಗಳು ಮಾತ್ರ ಈಕೆ ಕಾಲೇಜಿಗೆ ಆಗಮಿಸಿದ್ದು, ಬಳಿಕ ದೀರ್ಘಕಾಲ ರಜೆಯನ್ನು ಪಡೆದಿದ್ದಳು. ಈಕೆಯ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಮೃತ ವಿದ್ಯಾರ್ಥಿನಿಯ ಸಂತಾಪ ಸೂಚಕವಾಗಿ ಕಾಲೇಜಿಗೆ ಇಂದು ರಜೆ ಸಾರಲಾಗಿದೆ.