• 10 ಫೆಬ್ರವರಿ 2025

ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ:ಮಹೇಶ್ ಸವಣೂರು ಮೂವಪ್ಪೆಯಲ್ಲಿ ದೀಪಾವಳಿ ಕ್ರೀಡಾಕೂಟ

 ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ:ಮಹೇಶ್ ಸವಣೂರು ಮೂವಪ್ಪೆಯಲ್ಲಿ ದೀಪಾವಳಿ ಕ್ರೀಡಾಕೂಟ
Digiqole Ad

ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ:ಮಹೇಶ್ ಸವಣೂರು
ಮೂವಪ್ಪೆಯಲ್ಲಿ ದೀಪಾವಳಿ ಕ್ರೀಡಾಕೂಟ

ಕಾಣಿಯೂರು: ತೀರಾ ಗ್ರಾಮೀಣ ಪ್ರದೇಶವಾದ ಕೊಡಿಯಾಲದ ಮೂವಪ್ಪೆಯಲ್ಲಿ ದೀಪಾವಳಿ ಹಬ್ಬದ ಸಂದರ್ಭ ಸಾಮೂಹಿಕ ಕ್ರೀಡಾಕೂಟವನ್ನು 8 ವರ್ಷಗಳಿಂದ ಯಶಸ್ವಿಯಾಗಿ ಹಮ್ಮಿಕೊಂಡು ಬರುತ್ತಿರುವ ಯುವಕರ ಪರಿಶ್ರಮ ಶ್ಲಾಘನೀಯ ಎಂದು ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಸವಣೂರು ಹೇಳಿದರು.ಅವರು ಸ್ನೇಹಿತರ ಬಳಗ ಕಲ್ಪಡ,ಮೂವಪ್ಪೆ ಇದರ ವತಿಯಿಂದ ದೀಪಾವಳಿ ಪ್ರಯುಕ್ತ ಆಯೋಜಿಸಿದ
ಗ್ರಾಮೀಣ ಕ್ರೀಡಾಕೂಟ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಿರಿಯರ ಮಾರ್ಗದರ್ಶನದೊಂದಿಗೆ, ಯುವಕರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಕಠಿಣವಾದರೂ ಸಾಧಿಸಬಹುದು ಎಂದು ಅವರು ಹೇಳಿದರು.ವೇದಿಕೆಯಲ್ಲಿ ಶ್ರೀ ಕಾಣಿಯೂರು ಮಠದ ಮೆನೇಜರ್ ಶ್ರೀನಿಧಿ ಆಚಾರ್ಯ,ಕೊಡಿಯಾಲ ಗ್ರಾ.ಅಧ್ಯಕ್ಷ ಹರ್ಷನ್ ಕೆ.ಟಿ., ಧರ್ಮಸ್ಥಳ ಗ್ರಾ.ಯೋ.ಮೇಲ್ವಿಚಾರಕಿ ವಿಶಾಲ,ಕಾಣಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಹರ್ಷಿತ್ ನಿಡ್ಡಾಜೆ,ಬಳಗದ ಗೌರವಾಧ್ಯಕ್ಷ ಶಿವರಾಮ ಉಪಾಧ್ಯಾಯ ಉಪಸ್ಥಿತರಿದ್ದರು. ಬಳಗದ ಅಧ್ಯಕ್ಷ ಯುವರಾಜ ಕಲ್ಪಡ ಅಧ್ಯಕ್ಷತೆ ವಹಿಸಿದ್ದರು.ಕೇಶವ ಕೆ.ಪಿ.ಸ್ವಾಗತಿಸಿ, ಜಗದೀಶ್ ಅಂಗಾರಡ್ಕ ವಂದಿಸಿದರು.ಹರೀಶ್ ಕಲ್ಪಪಣೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ
ನಿವೃತ್ತ ಸೈನಿಕ ಸುಬೇದಾರ್ ರವಿಚಂದ್ರ‌ ಮಾರ್ಕಜೆ, ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಯತೀಶ್ ರೈ ಕುಕ್ಕುಮಜಲು, ನಿವೃತ್ತ ಅಂಗನವಾಡಿ ಶಿಕ್ಷಕಿ ಮೋಹಿನಿ ಮಾಳ,ನಿವೃತ್ತ ಅಂಚೆಪಾಲಕ ಅಶೋಕ್ ಪೈ ಬಾಚೋಡಿ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಾದ ಶಮಂತ್ ಉಪಾಧ್ಯಾಯ,ಶುಶಾಂತ್, ಆದ್ಯ ರೈ,ಕೀರ್ತಿ ಪೋಳಾಜೆಯವರನ್ನು ಗೌರವಿಸಲಾಯಿತು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಸುಜಿತ್ ಕಲ್ಪಡ,ಲೋಕೇಶ್ ಕೆ.ವಿ,ಧರ್ಮಪಾಲ ಕಲ್ಪಡ,ಗಣೇಶ್ ಅಂಗಾರಡ್ಕ,ಪ್ರಸಾದ ಕೆ.ಕೆ,ಆಶಿತ್ ಇಪ್ಪುಳ್ತಡಿ, ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು.

ಉದ್ಘಾಟನೆ: ಬೆಳಿಗ್ಗೆ ಪ್ರಗತಿಪರ ಕೃಷಿಕ ಕಾಂತಪ್ಪ ಗೌಡ ಕಲ್ಪಡ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ಮುಖ್ಯಶಿಕ್ಷಕ ನಾರಾಯಣ ಭಟ್,ಕಲ್ಲಗದ್ದೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ, ಎಸ್ ಡಿ ಎಂಸಿ ಅಧ್ಯಕ್ಷ ಶೇಷಪ್ಪ ಗೌಡ ಕಲ್ಪಡಗುತ್ತು, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ ಉಪಸ್ಥಿತರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ