ಸವಣೂರು ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಾಸಿಕ ಸಭೆ :
ಸವಣೂರು ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಮಾಸಿಕ ಸಭೆ :
ಶ್ರೀರಾಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಸವಣೂರು ಪಂಚಾಯತ್ ಇದರ ಮಾಸಿಕ ಒಕ್ಕೂಟ ಸಭೆ ಕುಮಾರಧಾರ ಸಭಾಂಗಣದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಶ್ರೀಮತಿ ದಮಯಂತಿ ಬಸ್ತಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಪಂಚಾಯತ್ ಪ್ರಭಾರ ಕಾರ್ಯದರ್ಶಿ ಶ್ರೀವಸಂತ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಮಹೇಶ್, ಕೋಶಾಧಿಕಾರಿ ಸರೋಜಿನಿ ಎಂ ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಮಹೇಶ್ ರವರು ಅಕ್ಟೋಬರ್ ತಿಂಗಳ ವರದಿ ವಾಚಿಸಿದರು.ಪಂಚಾಯತ್ ಕಾರ್ಯದರ್ಶಿ ವಸಂತ ಸರ್ ಅವರು ಘನ ತ್ಯಾಜ್ಯ ಘಟಕದ ಬಗ್ಗೆ ಉದ್ಯೋಗ ಖಾತರಿ ಯೋಜನೆ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಾರ್ಷಿಕ ಮಹಾಸಭೆಯ ಪೂರ್ವ ತಯಾರಿ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ರೇವತಿ ಕೆ ರವರು ,ಎಲ್ಲಾ ಪದಾಧಿಕಾರಿಗಳು ,ಸಂಪನ್ಮೂಲ ವ್ಯಕ್ತಿಗಳು, ಘಟಕದ ಸಿಬ್ಬಂದಿಗಳು, ಸಂಘದ ಸದಸ್ಯರು ಹಾಜರಿದ್ದರು. ಐಕ್ಯಾತ ಸ್ತ್ರೀ ಶಕ್ತಿ ಸಂಘದಿಂದ ಸಮುದಾಯ ಬಂಡವಾಳ ನಿಧಿಗೆ ಬೇಡಿಕೆ ಸ್ವೀಕರಿಸಲಾಯಿತು. ಎಂಬಿಕೆ ಗೀತಾ ಜಿಎಸ್ ನವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಪಶುಸಖಿ ಹೇಮಲತರವರು ವಂದನಾರ್ಪಣೆ ಗೈದರು