• 7 ಡಿಸೆಂಬರ್ 2024

ಕಡಬ: ಬಿಳಿನೆಲೆ ವಲಯದಲ್ಲಿ ವಿವಿಧ ಅನದಾನಗಳ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ.. ಧರ್ಮಸ್ಥಳ ಯೋಜನೆಯ ಸಹಾಯ ಪಡೆಯದ ವ್ಶಕ್ತಿ ಸಿಗುವುದು ಕಷ್ಟ…ಪಿ ಡಿ ಓ ಚಂದ್ರಾವತಿ ..

 ಕಡಬ: ಬಿಳಿನೆಲೆ ವಲಯದಲ್ಲಿ ವಿವಿಧ ಅನದಾನಗಳ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ.. ಧರ್ಮಸ್ಥಳ ಯೋಜನೆಯ ಸಹಾಯ ಪಡೆಯದ ವ್ಶಕ್ತಿ ಸಿಗುವುದು ಕಷ್ಟ…ಪಿ ಡಿ ಓ ಚಂದ್ರಾವತಿ ..
Digiqole Ad

ಕಡಬ: ಬಿಳಿನೆಲೆ ವಲಯದಲ್ಲಿ ವಿವಿಧ ಅನದಾನಗಳ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ..
ಧರ್ಮಸ್ಥಳ ಯೋಜನೆಯ ಸಹಾಯ ಪಡೆಯದ ವ್ಶಕ್ತಿ ಸಿಗುವುದು ಕಷ್ಟ…ಪಿ ಡಿ ಓ ಚಂದ್ರಾವತಿ ..

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾತಿ ಆಗಿರುವ ವಿವಿಧ ಅನುದಾನಗಳ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಳಿನೆಲೆ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿಯವರು ಮಾತನಾಡಿ ಧಾರ್ಮಿಕ ಹಿನ್ನೆಳೆಯುಳ್ಳ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳು ವ್ಯಕ್ತಿಯ ವ್ಯಕ್ತಿತ್ವದ ಜೊತೆಗೆ ಆರ್ಥಿಕ ಅಭಿವೃದ್ಧಿಯ ಪಥದತ್ತ ಸಮಾಜವು ಸಾಗುತ್ತಿರುವುದು ಅಭಿನಂದನಾರ್ಹ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸಮಾಜದ ಪ್ರತೀ ವ್ಯಕ್ತಿಯನ್ನೂ ತಲುಪಿರುವುದು ಗಮನಾರ್ಹ ಧರ್ಮಸ್ಥಳ ಯೋಜನೆಯ ಸಹಾಯ ಪಡೆಯದ ವ್ಯಕ್ತಿ ನಮ್ಮ ಬಿಳಿನೆಲೆ ವಲಯದಲ್ಲಿ ಸಿಗಲು ಸಾಧ್ಶವಿಲ್ಲ. ಯೋಜನೆಯ ಕಾರ್ಯಕ್ರಮಗಳನ್ನು ಇನ್ನಷ್ಟು ಪಸರಿಸಲು ಎಲ್ಲರೂ ಸಮಚಿತ್ತದಿಂದ ಸಹಕಾರ ನೀಡಬೇಕು ಎಂದರು.
ಶ್ರೀ ಗೋಪಾಲಕೃಷ್ಣ ಪ್ರೌಡಶಾಲೆಯ ಮುಖ್ಶ ಶಿಕ್ಷಕರಾದ ಸತ್ಯ ಶಂಕರ್ ರವರು ಸಂಪನ್ಮೂಲ ವ್ಶಕ್ತಿಯಾಗಿ ಮಾತನಾಡಿ ಧರ್ಮಸ್ಥಳ ದ ಧರ್ಮಾಧಿಕಾರಿಗಳ ದೂರದೃಷ್ಟಿ ತ್ವದ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಜನಮನಗೊಂಡಿದೆ.ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ತನ್ನ ಛಾಪು ಮೂಡಿಸಿ ವಿವಿಧ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಯೋಜನೆಯ ಕಾರ್ಯಕ್ರಮಗಳಿಂದ ಅನೇಕ ಕುಟುಂಬಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಿದೆ.ಸಮುದಾಯಕ್ಕೆ ಯೋಜನೆಯಿಂದ ನೀಡಿರುವ ಸಹಾಯಧನದಿಂದಾಗಿ ಶಿಕ್ಷಣ ಸಂಸ್ಥೆ ,ದೇವಸ್ಥಾನ ಹಾಗೂ ಸಮುದಾಯದ ವಿವಿಧ ಮಜಲುಗಳಲ್ಲಿ ಭರವಸೆಯ ಆಸರೆಯನ್ನು ಮೂಡಿಸಿದೆ. ಬಿಳಿನೆಲೆ ವಲಯದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಪರಿಚಯಿಸಲು ಸಮುದಾಯದ ಎಲ್ಲರೂ ಸಹಕಾರ ನೀಡಬೇಕು ಎಂದರು.
ಬಿಳಿನೆಲೆ ವಲಯದ ಶ್ರೀ ಗೋಪಾಲಕೃಷ್ಣ ಪ್ರೌಡಶಾಲೆˌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಬಾರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿರಿಬಾಗಿಲು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಂಕದಕಟ್ಟೆ ಐತ್ತೂರು., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲೆತಡ್ಕ ಬಂಟ್ರ ,ಶಾಲೆಗಳಿಗೆ ಡೆಸ್ಕ್ ಬೆಂಚ್ ಮಂಜೂರಾತಿ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇರ್ಮಾಯಿ ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತಿಲ ಬೈಲಡ್ಕ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಲೆತಡ್ಕ ಬಂಟ್ರ , ಶಾಲೆಗೆ ಜ್ಞಾನ ದೀಪ ಶಿಕ್ಷರ ಮಂಜೂರಾತಿ ಪತ್ರ ಹಾಗೂ ವಲಯದಲ್ಲಿ ವೃತ್ತಿಪರ ಶಿಕ್ಷಣ ಮಾಡುತ್ತಿರುವ 47 ವಿಧ್ಯಾರ್ಥಿಗಳಿಗೆ ಮಂಜೂರಾದ ಸುಜ್ಞಾನ ನಿಧಿ ಶಿಷ್ಶವೇತನ ದ ಮಂಜೂರಾತಿ ಪತ್ರವನ್ನು ವಿತರಿಸಿದ ಬಿಳಿನೆಲೆ ವಲಯದ ನಿಕಟಪೂರ್ವ ವಲಯಾಧ್ಶಕ್ಷರಾದ ಸತೀಶ್ ಎರ್ಕ ಮಾತನಾಡಿ..ಧರ್ಮಸ್ಥಳ ಯೋಜನೆಯ ಸಹಾಯಧನವು ನಮ್ಮ ವಲಯಕ್ಕೆ ಅತೀ ಹೆಚ್ಚು ಮಂಜೂರಾತಿ ಆಗಿದ್ದು ಇದರ ಸದುಪಯೋಗವನ್ನು ಪಡೆದುಕೊಂಡಿರುವ ಪ್ರತಿಯೊಬ್ಬರೂ ಯೋಜನೆಯ ಕಾರ್ಯಕ್ರಮಗಳ ವಿಸ್ತರಣೆಗೆ ಶಕ್ತಿಯಾಗಬೇಕು. ಇನ್ನಷ್ಟು ಅಭಿವೃಧ್ಧಿ ಕಾರ್ಯಕ್ರಮಗಳಿಗೆ ಧರ್ಮಸ್ಥಳ ಕ್ಷೇತ್ರದ ಸಹಾಯ ದೊರೆಯುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಬಿಳಿನೆಲೆ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ಒಗ್ಗು ಅಧ್ಯಕ್ಷತೆ ವಹಿಸಿದ್ದರು
ಮರ್ದಾಳ ಶೌರ್ಯ ಘಟಕದ ಘಟಕ ಪ್ರತಿನಿಧಿ ಹಾಗೂ ತಾಲೂಕು ಶೌರ್ಯ ಘಟಕದ ಕ್ಯಾಪ್ಟನ್ ಭವಾನಿಶಂಕರ್ ˌ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಚೇತನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಿರಿಬಾಗಿಲು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವಿನೋದ್ ಕೆ ಸಿ ವಂದಿಸಿದರು.
ಬಿಳಿನೆಲೆ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸತೀಶ್ ಆಜಾನ ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕು ಜ್ಞಾನ ವಿಕಾಸ ವಾರ್ಷಿಕೋತ್ಸವ ಬಿಳಿನೆಲೆ ಯಲ್ಲಿ ನಡೆಸುವ ಬಗ್ಗೆ ವಲಯದ ಒಕ್ಕೂಟದ ಅಧ್ಯಕ್ಷರುಗಳು ಪಧಾದಿಕಾರಿಗಳು ಹಾಗೂ ವಲಯದ ಸೇವಾಪ್ರತಿನಿಧಿಗಳಿದ್ದು ಚರ್ಚಿಸಲಾಯಿತು.

Digiqole Ad

ಈ ಸುದ್ದಿಗಳನ್ನೂ ಓದಿ