ಕುಂಬ್ರ: ಯುವ ವಕೀಲ ಅನಾರೋಗ್ಯದಿಂದ ನಿಧನ:
ಕುಂಬ್ರ: ಯುವ ವಕೀಲ ಅನಾರೋಗ್ಯದಿಂದ ನಿಧನ:
ಪುತ್ತೂರು: ಯುವ ವಕೀಲ ಕುಂಬ್ರ ನಿವಾಸಿ ಚಂದ್ರಕಾಂತ್ ಅಡೂರ್(38) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಅನಾರೋಗ್ಯದ ಹಿನ್ನಲೆ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ,ಮಗು ಕುಟುಂಬಸ್ಥರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.