PAN ಕಾರ್ಡ್ ಇರೋರಿಗೆ ಸರ್ಕಾರದಿಂದ ಕೊನೆಯ ಎಚ್ಚರಿಕೆ:
PAN ಕಾರ್ಡ್ ಇರೋರಿಗೆ ಸರ್ಕಾರದಿಂದ ಕೊನೆಯ ಎಚ್ಚರಿಕೆ:
ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವಂತೆ ಸರ್ಕಾರ ಈಗಾಗಲೇ ಹಲವು ಬಾರಿ ಹೇಳಿದೆ. ಹಣಕಾಸು ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಈ ನಿರ್ಧಾರ ಕೈಗೊಂಡಿದೆ. ಆದರೆ ಇನ್ನು ಮುಂದೆ ಆಧಾರ್ ಲಿಂಕ್ ಮಾಡದಿದ್ದರೆ ಭಾರೀ ದಂಡ ಬೀಳುವ ಸಾಧ್ಯತೆಯಿದೆ. ಹೌದು ಡಿ. 31 ರೊಳಗೆ ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವಂತೆ ಸೂಚಿಸಲಾಗಿದೆ.
ಡಿ. 31 ರ ನಂತರ ಆಧಾರ್ ಲಿಂಕ್ ಆಗಿರದ ಪಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದು. ನಿಷ್ಕ್ರಿಯಗೊಂಡರೆ ಹೊಸ ಪಾನ್ ಕಾರ್ಡ್ ತೆಗೆದುಕೊಳ್ಳಬೇಕಾಗುತ್ತದೆ.
ಆದರೆ ಇದರಲ್ಲೂ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರಕಾರ ಎಚ್ಚರಿಸಿದೆ.