ನೆಟ್ಟಣಿಗೆ ಮುಡ್ನೂರು ಪಂಚಮಿ ಸಂಜೀವಿನಿ ವರ್ಕ್ ಶೆಡ್ ಮತ್ತು ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ
ನೆಟ್ಟಣಿಗೆ ಮುಡ್ನೂರು ಪಂಚಮಿ ಸಂಜೀವಿನಿ ವರ್ಕ್ ಶೆಡ್ ಮತ್ತು ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ
ಪುತ್ತೂರು : ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
ಸಂಜೀವಿನಿ – ಡೇ ಎನ್ ಆರ್ ಎಲ್ ಎಂ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ ಜಿಲ್ಲಾ ಪಂಚಾಯತ್ ಮಂಗಳೂರು
ತಾಲ್ಲೂಕು ಪಂಚಾಯತ್ ಪುತ್ತೂರು
ಗ್ರಾಮ ಪಂಚಾಯತ್ ನೆಟ್ಟಣಿಗೆ ಮುಡ್ನೂರು ವತಿಯಿಂದ
ನೆಟ್ಟಣಿಗೆ ಮುಡ್ನೂರು ಸುರುಳಿಮೂಲೆಯಲ್ಲಿ ಪಂಚಮಿ ಸಂಜೀವಿನಿ ವರ್ಕ್ ಶೆಡ್ ಮತ್ತು ಹೊಲಿಗೆ ತರಬೇತಿ ಕೇಂದ್ರವನ್ನು ಇಂದು ಪುತ್ತೂರು ತಾಲ್ಲೂಕು ಮಾನ್ಯ ಶಾಸಕರಾದ ಶ್ರೀ ಅಶೋಕ್ ರೈ ಯವರು ಉದ್ಘಾಟನೆ ನೆರವೇರಿಸಿ ಹೊಲಿಗೆ ತರಬೇತಿಗೆ ಕಿಟ್ ವಿತರಣೆ ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಹೊಲಿಗೆ ತರಬೇತಿ ಮುಖ್ಯವಾಗಿದೆ ಈ ತರಬೇತಿಯನ್ನು ಆಸಕ್ತಿ ಇರುವವರು ಪಡೆದುಕೊಂಡು ಆದಾಯವನ್ನು ಉತ್ತಮ ರೀತಿಯಲ್ಲಿ ಗಳಿಸಬಹುದು ಎಂದು ತಿಳಿಸಿ ಶುಭ ಹಾರೈಸಿದರುಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ನವೀನ್ ಭಂಡಾರಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪೌಝಿಯಾ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಸುಬ್ಬಯ್ಯ ,ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ರಾಮ ಮೇನಾಲ , ತಾಲ್ಲೂಕು ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ ಜಗತ್ , ಗ್ರಾಮ ಪಂಚಾಯತ್ ಸದಸ್ಯರು, ಪಂಚಮಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ.ಟಿ , ಕಾರ್ಯದರ್ಶಿ ಶ್ರೀಮತಿ.ಕೆ , ಒಕ್ಕೂಟದ ಪದಾಧಿಕಾರಿಗಳು , ಸಂಘದ ಸದಸ್ಯರು , ಘನತಾಜ್ಯ ಘಟಕದ ಸಿಬ್ಬಂದಿಗಳು , ಹೊಲಿಗೆ ತರಬೇತಿಯ ಸದಸ್ಯರು ಹಾಜರಿದ್ದರು.