• 25 ಜನವರಿ 2025

ಜೀ ಕನ್ನಡದಲ್ಲಿ ಪ್ರಸಾರ ವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಪಿಲೇಶ್ವರ ಸಿಂಗಾರಿ ಮೇಳ (ರಿ)ಚಾರ್ವಕ ತಂಡ !

 ಜೀ ಕನ್ನಡದಲ್ಲಿ ಪ್ರಸಾರ ವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಪಿಲೇಶ್ವರ ಸಿಂಗಾರಿ ಮೇಳ (ರಿ)ಚಾರ್ವಕ ತಂಡ !
Digiqole Ad

ಜೀ ಕನ್ನಡದಲ್ಲಿ ಪ್ರಸಾರ ವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಪಿಲೇಶ್ವರ ಸಿಂಗಾರಿ ಮೇಳ (ರಿ)ಚಾರ್ವಕ ತಂಡ !

ಭವ್ಯ ಭಾರತದ ಸುಂದರ ಕರ್ನಾಟಕದ, ದಕ್ಷಿಣ ಕನ್ನಡ ಜಿಲ್ಲೆಯ, ಚಾರ್ವಕ ಗ್ರಾಮದ ಶ್ರೀ ಕಪಿಲೇಶ್ವರ ದೇವರ ಶುಭ ಅರ್ಶಿರ್ವಾದದೊಂದಿಗೆ ಶ್ರೀಯುತ ಚಂದ್ರನ್ ಕಾಸರಗೋಡು ಇವರಿಂದ ತರಬೇತಿಯನ್ನು ಪಡೆದುಕೊಂಡು ಚೆಂಡೆಯೆ ತನ್ನ ಉಸಿರು,ಚೆಂಡೆ ಸೇವೆಗೆ ನನ್ನ ಜೀವನ ಮುಡಿಪು ಅದೇ ಧರ್ಮ ‘ಎಂಬಂತೆ ತಮ್ಮನ್ನು ತಾವೇ ಚೆಂಡೆ ಸೇವೆಗೆ ಅರ್ಪಿಸಿಕೊಂಡ ‘ಸಕಲಕಲಾವಲ್ಲಭರು’ ಚಾರ್ವಕದ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ (ರಿ) ಚಾರ್ವಕ ಚೆಂಡೆ ಕಲಾವಿದರು
2019 ರಲ್ಲಿ ರಂಗಪ್ರವೇಶ ಮೂಲಕ ಚೆಂಡೆಯ ಕಲಾವಿದರಾಗಿ ಪ್ರವೇಶಿಸಿರುವ ತಾವುಗಳು ಜಿಲ್ಲೆಯಾದ್ಯಂತ ,ರಾಜ್ಯದಾದ್ಯಂತ ಜನರ ಮನಗೆದ್ದು ಆಸರೆಯಾದ ಈ ಚೆಂಡೆ ಸದ್ದು .5 ವರ್ಷದಲ್ಲಿ 500 ಕ್ಕೂ ಮಿಕ್ಕಿ ಕಾರ್ಯಕ್ರಮವನ್ನು ನೀಡಿ ,ಹಲವಾರು ಕಡೆ ಸನ್ಮಾನಿತ ಗೊಂಡ ತಂಡವು ಹೌದು,
ಪ್ರಪ್ರಥಮ ಬಾರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಅವಕಾಶ ಸಿಕ್ಕಾಗ ಫೈರ್ ಬ್ರಾಂಡ್ ಫರ್ಪಮೇನ್ಸ್ ತೆಗೆದುಕೊಂಡು, ತದನಂತರ ರಾಜ್ಯದ ಮೂಲೆ, ಮೂಲೆಗಳಲ್ಲಿ ನಮ್ಮ ಚಾರ್ವಕ ದ ತಂಡ ಹೆಸರು ಮಾಡಿಕೊಂಡು ,ಮಗದೊಮ್ಮೆ ಜೀ ಕನ್ನಡ ಶೋನ ಭವ್ಯವಾದ ವೇದಿಕೆಯಲ್ಲಿ ಸದ್ದು ಮಾಡಲು ಯುವಕರು ಸಜ್ಜಾಗಿ ತಮ್ಮ ಚೆಂಡೆ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ(ರಿ) ಚಾರ್ವಕ ಇದು ಒಂದು ಯುವಕರ ಸಂಘಟನೆಯಾಗಿದ್ದು ಬೇರೆಯಾವುದೆ ಅಂಗ ಸಂಸ್ಥೆ ಯನ್ನು ಹೊಂದಿರುವುದಿಲ್ಲ ಆದರೂ ಕೆಲವೊಂದು ತಂಡ ಈ ಸಂಸ್ಥೆಯ ಹೆಸರನ್ನು ಬಳಸಿಕೊಂಡು ,ಅದಲ್ಲದೇ ತಮ್ಮ ಸಂಸ್ಥೆಯ ಅಡಿಯಲ್ಲಿ ಇರುವ ಕಲಾವಿದರ ವೈಯಕ್ತಿಕ ಅಭಿಮಾನದಿಂದ ಬರುವ ಕೆಲವೊಂದು ಕಾರ್ಯಕ್ರಮವನ್ನು ಸಹ ಅದೇ ತಂಡದಲ್ಲಿ ಇರುವ ಕಲಾವಿದನೆಂದು ಸಂಪರ್ಕ ಮಾಡಿಕೊಂಡು ಈ ಸಂಸ್ಥೆಯ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರೇ ಇಂತಹ ಯಾವುದೇ ನಕಾರಾತ್ಮಕ ತಂತ್ರಗಳು ಇದ್ದರೂ ಅದೂ ಯಾವುದನ್ನು ಲೆಕ್ಕಿಸದೆ ದಿನದಿಂದ ದಿನಕ್ಕೆ ಊರು, ಪರವೂರ ಜನರಿಂದ ಸಿಗುವ ಪ್ರೋತ್ಸಾಹ ಹಾಗೂ ಸಹಕಾರದ ಜೊತೆಗೆ ಕಾರ್ಯಕ್ರಮ ವನ್ನು ನೀಡುವುದರ ಜೊತೆ, ಜೊತೆಗೆ ತಮ್ಮ ಸಂಸ್ಥೆಯಿಂದ ಸಮಾಜಕ್ಕೆ ಏನಾದರೂ ಒಂದು ಸಂದೇಶವನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ 5 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಈ ತಂಡದ ಎಲ್ಲಾ ಕಲಾವಿದರಿಂದ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಇಲ್ಲಿ ರಕ್ತದಾನ,ಚಾರ್ವಕ ದ ದೇವಸ್ಥಾನದ ಆಸುಪಾಸಿನ ಪರಿಸರದಲ್ಲಿ ನೂರಕ್ಕೂ ಹೆಚ್ಚು ಉತ್ತಮ ಜಾತಿ ಸಸಿಗಳನ್ನು ನೆಡಲಾಯಿತು.ಹಾಗೇಯೆ ಈ ತಂಡವು ಗ್ರಾಮೀಣ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ದಿನದ ಕೆಸರು ಗದ್ದೆ ಕ್ರೀಡಾಕೂಟ ವನ್ನು ಆಯೋಜಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ