• 7 ಡಿಸೆಂಬರ್ 2024

ನೆಟ್ಟಣಿಗೆ ಮುಡ್ನೂರು ಗಾಳಿಮುಖ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

 ನೆಟ್ಟಣಿಗೆ ಮುಡ್ನೂರು ಗಾಳಿಮುಖ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ
Digiqole Ad

ನೆಟ್ಟಣಿಗೆ ಮುಡ್ನೂರು ಗಾಳಿಮುಖ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ:

ಈಶ್ವರಮಂಗಲ : ನೆಟ್ಟಣಿಗೆ ಮುಡ್ನೂರು ಗಾಳಿಮುಖ ಅಂಗನವಾಡಿ ಕೇಂದ್ರದಲ್ಲಿ ಇಂದು ನವೆಂಬರ್ 14 ಜವಹರ್ ಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಖದೀಜ ಎನ್‌.ಎ ಅವರು ಮಾತನಾಡಿ ಚಾಚಾ ನೆಹರೂ ಅವರ ಸಂದೇಶವನ್ನು ನಾವು ಮರೆಯಬಾರದು ಅದೆಂದರೆ ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು ಅದಲ್ಲದೆ ಅವರಿಗೆ ಸಾಕಷ್ಟು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು ಈದಿನವು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ದತೆಯನ್ನು ಪುನರ್ ನವೀಕರಿಸಲು ನೆನಪು ಮಾಡುವುದು ಮತ್ತು ಮಕ್ಕಳಿಗೆ ಅವರ ಚಾಚಾ ನೆಹರು ಅವರ ಆದರ್ಶದಂತೆ ಮತ್ತು ಅವರ ಮಾದರಿಯಲ್ಲಿ ಬದುಕಲು ಕಲಿಸಬೇಕು ಎಂದು ತಿಳಿಸಿದರು.
ನೆಟ್ಟಣಿಗೆ ಮುಡ್ನೂರು ಪಂಚಾಯತ್ ಸದಸ್ಯರಾದ ಶ್ರೀ ಮಹಮ್ಮದ್ ರಿಯಾಜ್ ರವರು ಮಾತನಾಡಿ ಭಾರತದಲ್ಲಿ 14ನೆ ನವಂಬರ್ ಅನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವರು ಭಾರತದ ದಂತ ಕಥೆಯಾದ ಸ್ವಾತಂತ್ರ ಹೋರಾಟಗಾರ ಮತ್ತು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರ್ ಲಾಲ್ ನೆಹರು ಅವರ ಜನ್ಮದಿನ
ಅವರಿಗೆ ಇರುವ ಮಕ್ಕಳ ಬಗೆಗಿನ ಅಪಾರ ಪ್ರೇಮದ ಪ್ರತೀಕವಾಗಿ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಗಾಳಿಮುಖ ಅಂಗನವಾಡಿ ನಿವೃತ್ತ ಕಾರ್ಯಕರ್ತೆಯಾದ ಶ್ರೀಮತಿ ಮಾಲತಿ ಯವರು ಮಾತನಾಡಿ ಈ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಯ್ದುಕೊಳ್ಳಲು ಕಾರಣ ನೆಹರು ಅವರಿಗೆ ಮಕ್ಕಳ ಬಗೆಗಿನ ಅಪಾರ ಪ್ರೀತಿ ಮತ್ತು ಮೋಹ ಅಲ್ಲದೆ ನೆಹರು ಅವರು ಕೂಡಾ ದೇಶದ ವಿಶೇಷ ಮಗುವೆಂದೆ ಪರಿಗಣಿಸಬಹುದು ಸ್ವಾತಂತ್ರ ಹೋರಾಟದಲ್ಲಿ ಅಪಾರವಾಗಿ ಬಹುಕಾಲ ಶ್ರಮಿಸಿದವರು ಎಂದು ತಿಳಿಸಿದರು
ಆಶಾ ಕಾರ್ಯಕರ್ತೆ ಶ್ರೀಮತಿ ಪುಷ್ಪಲತಾ ಅವರು ಮಾತನಾಡಿ ಸ್ವತಂತ್ರ ಭಾರತದ ಮೊದಲ ಪ್ರಧಾನಿ ಆಗಿದ್ದು ಜವಾಹರಲಾಲ್ ನೆಹರು ರವರು. ಅವರು 1947 ರಿಂದ 1964 ರವರೆಗೆ ಅಂದರೆ ಅವರ ಮರಣದವರೆಗೂ ಭಾರತದ ಪ್ರಧಾನಿಯಾಗಿ ಎರಡು ಅವಧಿಯಲ್ಲಿ ಸೇವೆ ಸಲ್ಲಿಸಿದ್ದರು ಮಕ್ಕಳು ಪ್ರೀತಿಯಿಂದ ನೆಹರು ರವರನ್ನು ಚಾಚಾ ನೆಹರು ಎಂದು ಕರೆಯುತ್ತಿದ್ದರು ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧ್ಯೇಯವಾಗಿತ್ತು ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಕು.ಮೋಕ್ಷಿನಿ ಅವರು ಮಾತನಾಡಿ ವಿದ್ಯಾರ್ಥಿಗಳ ನೆಚ್ಚಿನ ಚಾಚಾ – ಜವಾಹರಲಾಲ್ ನೆಹರು ರವರು ” Tomorrow is Yours” ಎಂದು ಮಕ್ಕಳಿಗೆ ಯಾವಾಗಲೂ ಹೇಳುತ್ತಿದ್ದರು ಇದರ ಅರ್ಥ ನಾಳೆ ನಿಮ್ಮದು ಎಂದು ಭಾರತದ ತರುಣ ಪೀಳಿಗೆಯನ್ನು ಉದ್ದೇಶಿಸಿ ಅವರು ಹೀಗೆ ನುಡಿಯುತ್ತಿದ್ದದ್ದು ತುಂಬಾ ವಿಶೇಷವಾಗಿತ್ತು ಭಾರತದ ಸ್ವತಂತ್ರಕ್ಕೆ ಹೋರಾಡಿದ ಪ್ರಮುಖ ನಾಯಕರಲ್ಲಿ ನೆಹರು ಸಹ ಒಬ್ಬರಾಗಿದ್ದರು ದೇಶದ ಪ್ರಪ್ರಥಮ ಪ್ರಧಾನಿಯಾಗಿ ಇವರ ಜೀವನ ಆದರ್ಶವಾದುದು ಎನ್ನಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗಾಳಿಮುಖ ಅಂಗನವಾಡಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ ಪಂಚಾಯತ್ ಸದಸ್ಯರಾದ ಶ್ರೀ ರಿಯಾಜ್ ಅವರಿಗೆ ಅಂಗನವಾಡಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು
ಅಂಗನವಾಡಿಯ ಪುಟಾಣಿ ಮಕ್ಕಳಿಗೆ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ನೀಡಲಾಯಿತು ಹಾಗೂ ಲಘ ಉಪಾಹಾರ ನೀಡಲಾಯಿತು 
ಕಾರ್ಯಕ್ರಮದಲ್ಲಿ ಅಂಗನವಾಡಿ ಸಹಾಯಕಿ ಶ್ರೀಮತಿ ಚಿತ್ರ , ಎಲ್ಲಾ ಮಕ್ಕಳ ಪೋಷಕರು ಮತ್ತು ಸಂಘದ ಸದಸ್ಯರು ಹಾಜರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ