• 7 ಡಿಸೆಂಬರ್ 2024

ನಾಣಿಲ ಶಾಲೆಯಲ್ಲಿ ಮಕ್ಕಳ ದಿನಾಚರಣೆ

 ನಾಣಿಲ ಶಾಲೆಯಲ್ಲಿ ಮಕ್ಕಳ ದಿನಾಚರಣೆ
Digiqole Ad

ನಾಣಿಲ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕಡಬ ತಾಲೂಕು ಚಾರ್ವಾಕ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ನಾಣಿಲದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿದ್ಯಾರ್ಥಿ ನಾಯಕಿ ಅಸ್ಮಿತ ವಹಿಸಿದ್ದರು . ಅತಿಥಿಗಳಾಗಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ದಲಾರಿ ,ಮುಖ್ಯ ಗುರುಗಳಾದ ಪದ್ಮಯ್ಯ ಗೌಡ, ತರಗತಿ ನಾಯಕರಾದ ರಿತೇಶ್, ನಿವೇದ್, ಸುಕನ್ಯಾ, ವರ್ಣಿಕ ಡಿ ವಿ, ಚಾರ್ವಿ, ಶಾನ್ವಿ , ಕೀರ್ತಿಕಾ ಭಾಗವಹಿಸಿದ್ದರು.

ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಸಹ ಶಿಕ್ಷಕ ಸುನಿಲ್ ಮಾತನಾಡಿದರು. ಪುಟಾಣಿ ಮಕ್ಕಳು ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಸಹ ಶಿಕ್ಷಕರಾದ ಮೋಹಿನಿ, ಶೋಭಾ, ನಂದಿನಿ, ಚೇತನ, ಶ್ವೇತಾ, ಬಹುಮಾನ ವಿತರಿಸಿದರು, ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಊರವರು ಭಾಗವಹಿಸಿದರು. ಕುಮಾರಿ ಮಾನ್ವಿ ಸ್ವಾಗತಿಸಿದರು, ಕುಮಾರಿ ಕಾವ್ಯ ಧನ್ಯವಾದ ಅರ್ಪಿಸಿದರು, ಕುಮಾರಿ ವಂಶಿಕ ಡಿ ವಿ ನಿರೂಪಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ