• 25 ಜನವರಿ 2025

ಸಾಂದೀಪನಿಯಲ್ಲಿ ವಾರ್ಷಿಕ ಕ್ರೀಡಾ ಕೂಟ

 ಸಾಂದೀಪನಿಯಲ್ಲಿ ವಾರ್ಷಿಕ ಕ್ರೀಡಾ ಕೂಟ
Digiqole Ad

ಸಾಂದೀಪನಿಯಲ್ಲಿ ವಾರ್ಷಿಕ ಕ್ರೀಡಾ ಕೂಟ

ನರಿಮೊಗರು ಗ್ರಾಮದ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ 2024-25 ನೇ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟವು ನವಂಬರ್ 14 ಮಕ್ಕಳ ದಿನಾಚರಣೆಯಂದು ಸಂಸ್ಥೆಯ ಭವ್ಯ ಕ್ರೀಡಾಂಗಣದಲ್ಲಿ ನಡೆಯಿತು.
ವಿದ್ಯಾರ್ಥಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ತಂಡವು ಘೋಷ್ ತಂಡದೊಂದಿಗೆ ನಡೆದ ಆಕರ್ಷಕ ಪಥ ಸಂಚಲನದಲ್ಲಿ ಅಧ್ಯಕ್ಷರು ಹಾಗೂ ಗೌರವಾನ್ವಿತರು ಗೌರವ ವಂದನೆ ಸ್ವೀಕರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಆರ್ಯನ್ ಕುಮಾರ್ 7ನೇ ತರಗತಿ, ಭುವನ್ ಕರಂದ್ಲಾಜೆ 9ನೇ ತರಗತಿ, ಹಸ್ತಾ 8ನೇ ತರಗತಿ ರವರು ಕ್ರೀಡಾಜ್ಯೋತಿಯನ್ನು ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ರಿಗೆ ಹಸ್ತಾಂತರಿಸಿದರು.
ನಂತರ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯರವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.
ಮುಖ್ಯ ಅತಿಥಿಗಳಾದ ಶ್ರೀ ಚಂದ್ರಶೇಖರ ಪನ್ನೆ ಬೆಳ್ಳಾರೆ (ಪೋಷಕರು ಹಾಗೂ ಬೆಳ್ಳಾರೆ ಗ್ರಾಮಪಂಚಾಯತ್ ಅಧ್ಯಕ್ಷರು )
ಮಾತನಾಡುತ್ತಾ ನಮ್ಮ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗೆ ಹೆಚ್ಚಿನ ಅವಕಾಶ ಇರಲಿಲ್ಲ ಹಾಗೆಯೇ ನಮ್ಮನ್ನು ತಯಾರಿಸುವ ಶಿಕ್ಷಕರು ಇರಲಿಲ್ಲ ಆದರೆ ಇಂದು ಒಳ್ಳೆಯ ತರಬೇತಿ ನೀಡಿ ರಾಜ್ಯ -ರಾಷ್ಟ್ರ ಮಟ್ಟಕ್ಕೆ ಪ್ರತಿಭೆ ತೋರಿಸುವಂತಹ ಅವಕಾಶ ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಟ್ಟಿದ್ದಾರೆ. ಈ ಶಾಲೆ ಶೈಕ್ಷಣಿಕವಾಗಿ ಜೊತೆಗೆ ಸಂಸ್ಕಾರ, ಸಂಸ್ಕೃತಿ, ಪರಂಪರೆ ಯನ್ನು ಉಳಿಸಿಕೊಂಡು ಸಾಧಿಸುತ್ತಾ ಬರುತ್ತಿದೆ. ಈ ಶಾಲೆಯಲ್ಲಿ ತಾಲೂಕು ಮಟ್ಟದ ಕ್ರೀಡೆ ಬಹಳ ಸುಂದರವಾಗಿ ನಡೆದಿದೆ ಇವತ್ತಿನ ಕ್ರೀಡೆಯಲ್ಲಿ ಕ್ರೀಡಾಮನೋಭಾವದಿಂದ ಸೋಲನ್ನು ಒಪ್ಪಿ ಜಯವನ್ನು ಸ್ವೀಕರಿಸುವ ಕಾರ್ಯ ನಡೆಯಲಿ ಸತ್ಪ್ರಜೆಯಾಗಿ ಬೆಳೆಯಿರಿ ಎಂದು ಶುಭ ಹಾರೈಸಿದರು.
ನಂತರ ಶಾಲಾ ಅಧ್ಯಕ್ಷರು ಮಕ್ಕಳ ದಿನಾಚರಣೆಯ ಶುಭ ಹಾರೈಸಿ ಕ್ರೀಡೆ ಎಂಬುದು ಒಂದು ಗೆಲ್ಲುವ ಯುದ್ಧ ಸೋತವರಿಗೂ ಕೂಡ ಹೇಗೆ ಗೆಲ್ಲಬಹುದು ಎಂಬುದನ್ನು ಕಲಿಯುವ ಅವಕಾಶವಿದೆ. ಶಕ್ತಿಯನ್ನು ಕಳೆದುಕೊಳ್ಳದೆ ಶಕ್ತಿಯನ್ನು ಸಂಗ್ರಹಿಸುವಂತಹ ಸಾಮರ್ಥ್ಯ ಬೆಳೆಯಲಿ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ 7ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಕುಮಾರ್ ರಿಗೆ ಶುಭವನ್ನು ಕೋರಿ ಗೆದ್ದು ಬರುವಂತೆ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್, ಮುಖ್ಯ ಅಥಿತಿಗಳಾದ ಶ್ರೀ ಚಂದ್ರಶೇಖರ ಪನ್ನೆ , ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ, ಶಾಲಾ ಮುಖ್ಯಗುರುಗಳಾದ ಶ್ರೀಮತಿ ಜಯಮಾಲ ವಿ ಎನ್ ರವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಜಯಮಾಲಾ ವಿ ಎನ್ ರವರು ಮಕ್ಕಳದಿನಾಚರಣೆ ಯ ಶುಭಾಶಯಗಳನ್ನು ತಿಳಿಸುತ್ತಾ
ಸೋಲು, ಗೆಲುವು ಜೀವನದ ಎರಡು ಮುಖಗಳಿದ್ದಂತೆ ಎಷ್ಟು ಸಲ ನಾವು ಸೋಲನ್ನು ಸ್ವೀಕರಿಸುತ್ತೇವೆಯೋ ಅಷ್ಟೇ ಸದೃಢ ರಾಗುತ್ತೇವೆ ಎನ್ನುತ್ತಾ ಎಲ್ಲರನ್ನು ಆದರದಿಂದ ಸ್ವಾಗತಿಸಿದರು.
ಶಿಕ್ಷಕ ಶ್ರೀ ರವಿಶಂಕರ್ ರವರು ಕಾರ್ಯಕ್ರಮ ನಿರೂಪಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ರವರು ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಯನ್ನು ಭೋದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಯಾದ ಕುಮಾರಿ ಸುದೀಕ್ಷಾ ರವರು ಧನ್ಯವಾದ ಗೈದರು.
ನಂತರ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆ ಗಳು ನಡೆಯಿತು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Digiqole Ad

ಈ ಸುದ್ದಿಗಳನ್ನೂ ಓದಿ