ಶಬರಿಮಲೆ ಗೆ ಬರಲಿದೆ ಕೇಬಲ್ ಕಾರ್
,ಶಬರಿಮಲೆ ಗೆ ಬರಲಿದೆ ಕೇಬಲ್ ಕಾರ್
ತಿರುವನಂತಪುರಂ: ಶಬರಿಮಲೆಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇರಳ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಪಂಪಾದಿಂದ ಸನ್ನಿಧಾನದವರೆಗೆ ಮುಂದಿನ ವರ್ಷದೊಳಗೆ ರೋಪ್ ವೇ ನಿರ್ಮಿಸಲಾಗುವುದು. ಮುಂದಿನ ಮಂಡಲೋತ್ಸವದ ವೇಳೆಗೆ ರೋಪ್ ವೇ ಸಿದ್ಧವಾಗಲಿದೆ. ಎಂದು ಕೇರಳ ದೇವಸ್ವಂ ಸಚಿವ ವಿ.ವಿ. ವಾಸವನ್ ಹೇಳಿದ್ದಾರೆ. ಸುಮಾರು 250 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುವ ರೋಪ್ ವೇ 2.7 ಕಿಲೋಮೀಟರ್ ಇರಲಿದೆ.
ಕೇಬಲ್ ಕಾರ್ ವ್ಯವಸ್ಥೆಯಿಂದ ಸರಕುಗಳ ಸಾಗಾಣಿಕೆಗೆ , ಅನಾರೋಗ್ಯ ಪೀಡಿತರು, ವೃದ್ಧ ಯಾತ್ರಿಕರಿಗೆ ಅನುಕೂಲವಾಗಲಿದೆ.
ಪ್ರಸ್ತುತ ಡೀಸೆಲ್ ಚಾಲಿತ ಟ್ರ್ಯಾಕ್ಟರ್ ಗಳ ಬಳಕೆ ಹೆಚ್ಚಾಗಿದ್ದು, ಅರಣ್ಯ ಪ್ರದೇಶದಲ್ಲಿ ವಾಯುಮಾಲಿನ್ಯ ಉಂಟಾಗುತ್ತಿದೆ ರೋಪ್ ವೇ ನಿರ್ಮಾಣದಿಂದ ಟ್ರ್ಯಾಕ್ಟರ್ ಗಳ ಬಳಕೆ ಕಡಿಮೆಯಾಗಲಿದೆ. ಇದರಿಂದ ಪೆರಿಯಾರ್ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಮಾಲಿನ್ಯ ನಿಯಂತ್ರಣವಾಗಲಿದೆ ಎಂದು ಹೇಳಲಾಗಿದೆ.