ನವ ಜೀವನ ಸದಸ್ಯರ ಸಮಾವೇಶ, ಕ್ರೀಡಾ ಕೂಟ, ಕುಟುಂಬ ಸಮ್ಮಿಲನ ಕಾರ್ಯಕ್ರಮ
ನವ ಜೀವನ ಸದಸ್ಯರ ಸಮಾವೇಶ, ಕ್ರೀಡಾ ಕೂಟ, ಕುಟುಂಬ ಸಮ್ಮಿಲನ ಕಾರ್ಯಕ್ರಮ
ನವ ಜೀವನ ಜೀವನ ಸದಸ್ಯರ ಸಮಾವೇಶ ,ಕ್ರೀಡಾ ಕೂಟ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಪುಣ್ಚಪ್ಪಾಡಿ ಗೌರಿ ಸದನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಕಡಬ,ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಕಡಬ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸವಣೂರು ವಲಯ ಇದರ ಜಂಟಿ ಆಶ್ರಯದಲ್ಲಿ ನಡೆಯಿತು.
ಕಾರ್ಯಕ್ರಮದ ಉಧ್ಛಾಟನೆಯನ್ನು 1843 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಚಿನ್ ಕುಮಾರ್ ಜೈನ್ ನೆರವೇರಿಸಿ ಮಾತನಾಡಿ ಶಿಬಿರದಿಂದ ಬದಲಾವಣೆ ಗೊಂಡು ಕುಟುಂಬದ ಅಭಿವೃದ್ಧಿಗೆ ಶ್ರಮಿಸಬೇಕು.ಸರಕಾರದ ಸವಲತ್ತನ್ನು ಪಡೆಯುವುದರ ಜೊತೆಗೆ ಯೋಜನೆ ಬಗ್ಗೆ ಪ್ರೀತಿ ಬೆಳೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ರಾಕೇಶ್ ರೈ ಕೆಡೆಂಜಿ ಮಾತನಾಡಿ ನವ ಜೀವನ ದ ಸದಸ್ಯರು ಯೋಜನೆಯು ನಿಗದಿ ಪಡಿಸಿದ ವಾರ, ತಿಂಗಳ ಸಭೆಯಲ್ಲಿ ಕಡ್ಡಾಯವಾಗಿ ಸೇರಿದಾಗ ನಮ್ಮ ಮನಸ್ಸು ಮತ್ತಷ್ಟು ಗಟ್ಟಿಯಾಗುತ್ತದೆ. ನಿಮ್ಮ ಬದಲಾವಣೆಗೆ ಅನೇಕರ ಶ್ರಮ ,ತ್ಯಾಗ ಇದೆ ಅದನ್ನು ನೀವು ಯಾವತ್ತೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಸವಣೂರು ಗ್ರಾ ಪಂ ಅಧ್ಯಕ್ಷ ರಾದ ಸುಂದರಿ ಬಿ ಎಸ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.ವೇದಿಕೆಯಲ್ಲಿ ಎ ಪಿ ಎಂ ಸಿಯ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ತಾರಾನಾಥ ಕಾಯರ್ಗ,ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗಣೇಶ್ ಉದನಡ್ಕ,ಸಮರ್ಥಜನ ಸೇವಾ ಟ್ರಸ್ಟ್ ನ ಅಧ್ಯಕ್ಷ ಗಿರಿಶಂಕರ ಸುಲಾಯ,ಪುಣ್ಚಪ್ಪಾಡಿ ಒಕ್ಕೂಟದ ಅಧ್ಯಕ್ಷ ವಿಜಯ ಕುಚ್ಚೆಜಾಲು,ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ, ಮೊದಲಾದವರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿಗಳಾದ ಅಮಿತಾ,ಮೀನಾಕ್ಷಿ ಪ್ರಾರ್ಥಿಸಿ, ಕಡಬ ತಾಲೂಕು ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್ ಕೆ ಸವಣೂರು ಸ್ವಾಗತಿಸಿದರು. ವಲಯ ಮೇಲ್ವಿಚಾರಕರಾದ ವೀಣಾ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ,ಸತೀಶ್ ಬಲ್ಯಾಯ,ಶಿವರಾಮ ಗೌಡ ಮೆದು,ಸಂಪತ್ ಕುಮಾರ್ ಇಂದ್ರ,ಮೋಹಿತ್ ಪೂಜಾರಿಮೂಲೆ,ಜರ್ನಾಧನ ನೂಜಾಜೆ, ಯಶೋಧ ನೂಜಾಜೆ, ಶಿವಪ್ಪನಾಯ್ಕ ನೂಜಾಜೆ,ಧಕ್ಷಿತ್ ರಾಜ್ ಓಡಂತರ್ಯ,ಕುಸುಮಾಧರ ಚಾರ್ವಾಕ, ಭಾಗಿರಥಿ ಮುದ್ವ,ಸೇವಾ ಪ್ರತಿನಿಧಿಗಳಾದ ಕಾವ್ಯ ಚಾರ್ವಾಕ, ಕಾವ್ಯ ಕೊಂಬಕೆರೆ,ಮೊದಲಾದವರು ಸಹಕರಿಸಿದರು.