• 7 ಡಿಸೆಂಬರ್ 2024

ಉಪ್ಪಿನಂಗಡಿ: ಅಖಿಲ ಭಾರತ ಅಂತರ್ ವಿವಿ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್: ಮುಂಬೈ ವಿವಿಯ ರಾಜ್ ತಿವಾರಿ ಪ್ರಥಮ:

 ಉಪ್ಪಿನಂಗಡಿ: ಅಖಿಲ ಭಾರತ ಅಂತರ್ ವಿವಿ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್: ಮುಂಬೈ ವಿವಿಯ ರಾಜ್ ತಿವಾರಿ ಪ್ರಥಮ:
Digiqole Ad

ಉಪ್ಪಿನಂಗಡಿ: ಅಖಿಲ ಭಾರತ ಅಂತರ್ ವಿವಿ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್ಶಿಪ್:
ಮುಂಬೈ ವಿವಿಯ ರಾಜ್ ತಿವಾರಿ ಪ್ರಥಮ:

ಉಪ್ಪಿನಂಗಡಿ: ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದೇ ಪ್ರಥಮ ಬಾರಿಗೆ ಅಖಿಲ ಭಾರತ ಅಂತರ್ ವಿವಿ ಪುರುಷರ 10 ಕೀ.ಮೀ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ಸ್ಪರ್ಧೆ ನಿನ್ನೆ ನಡೆಯಿತು. ಒಟ್ಟು 141 ವಿಶ್ವವಿದ್ಯಾಲಯಗಳಿಂದ 846 ಸ್ಪರ್ಧಿಗಳು ಭಾಗಿಯಾಗಿದ್ದರು.
ಮುಂಬೈ ವಿವಿಯ ರಾಜ್ ತಿವಾರಿ ಇದರಲ್ಲಿ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದರು.
ಕಾಲೇಜು ಕ್ರೀಡಾಂಗಣದಲ್ಲಿ ನಿನ್ನೆ ಸಂಜೆ 4 ಗಂಟೆಗೆ ಕ್ರಾಸ್ ಕಂಟ್ರಿ ಓಟಕ್ಕೆ ಚಾಲನೆ ನೀಡಲಾಯಿತು.
ಒಟ್ಟು 10 ಕೀ. ಮೀ ದೂರದ ಓಟವು ಕಾಲೇಜು ಕ್ರೀಡಾಂಗಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಕ್ಕೆ ಪ್ರವೇಶಿಸುವ ಕ್ರೀಡಾಳುಗಳು ಗಾಂಧಿಪಾರ್ಕ್ ಮೂಲಕ ಬ್ಯಾಂಕ್ ರಸ್ತೆಯಾಗಿ ಬಸ್ ನಿಲ್ದಾಣ ಬಳಿಯ ವೃತ್ತಕ್ಕೆ ತೆರಳಿ ಅಲ್ಲಿಂದ ತಿರುವು ಪಡೆದು ಮತ್ತೆ ಬೈಪಾಸ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಪಡೆದು ಹಿರೇಬಂಡಾಡಿ ಕೊಯಿಲ ರಸ್ತೆಯ ಮೂಲಕ ಹಿರೇಬಂಡಾಡಿ ಜಂಕ್ಷನ್ ಸಮೀಪವಿರುವ ನ್ಯಾಯಬೆಲೆ ಅಂಗಡಿಯವರೆಗೆ ಸಾಗಿ ನಂತರ ತಿರುಗಿ ಅದೇ ರಸ್ತೆಯಾಗಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿ ಕಾಲೇಜು ಆವರಣಕ್ಕೆ ತಲುಪುವಂತೆ ಓಟದ ಮಾರ್ಗ ನಿಗದಿ ಮಾಡಲಾಗಿತ್ತು.

Digiqole Ad

ಈ ಸುದ್ದಿಗಳನ್ನೂ ಓದಿ