ಕಾಣಿಯೂರು ಹಾಲು ಉತ್ಪಾದಕರ ಸಂಘದಿಂದ ರೈತ ಕಲ್ಯಾಣ ನಿಧಿಯ ಸಹಾಯಧನ ವಿತರಣೆ
ಕಾಣಿಯೂರು ಹಾಲು ಉತ್ಪಾದಕರ ಸಂಘದಿಂದ ರೈತ ಕಲ್ಯಾಣ ನಿಧಿಯ ಸಹಾಯಧನ ವಿತರಣೆ
ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಂಘದ ಸದಸ್ಯರಾಗಿ ಹಾಲು ಪೂರೈಕೆ ಮಾಡುತ್ತಿದ್ದ ರಾಧಾಕೃಷ್ಣ ಗೌಡ ಕಂಪ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಪತ್ನಿ ಜಾನಕಿ ಕಂಪ ಇವರಿಗೆ ದ. ಕ. ಹಾಲು ಒಕ್ಕೂಟದ ರೈತ ಕಲ್ಯಾಣ ನಿಧಿಯಿಂದ ರೂ. 50,000 ವನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ಉಪಾಧ್ಯಕ್ಷ ಚಂದ್ರಯ್ಯ ಆಚಾರ್ಯ ಅಬೀರ, ನಿರ್ದೇಶಕರಾದ ರಾಜೇಶ್ ಮುಂಡಾಳ, ಮುರಳೀಧರ ಪುಣ್ಚತ್ತಾರು, ಭರತ್ ಅಗಳಿ, ರಾಜೇಶ್ ಮೀಜೆ, ಸೌಮ್ಯ ಪೈಕ, ಹೇಮಾವತಿ ಮುಗರಂಜ,ಕಾರ್ಯದರ್ಶಿ ಜಗದೀಶ್ ಗೌಡ, ಸಿಬ್ಬಂದಿಗಳಾದ ಚಂದ್ರಶೇಖರ, ಸೀತಾರಾಮ, ಪುಷ್ಪಾ, ಮನೋರಮ ಉಪಸ್ಥಿತರಿದ್ದರು.