ಪುತ್ತೂರು: ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ಪೂಜಾರಿ ನಿಧನ:
ಪುತ್ತೂರು: ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ಪೂಜಾರಿ ನಿಧನ:
ಪುತ್ತೂರು: ಶಿಕ್ಷಕ, ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ಪೂಜಾರಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರು ಮೂಲತಃ ಮಾಣಿಯವರಾಗಿದ್ದು, ಬೊಳುವಾರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ನಂತರ ಗುಣಮುಖರಾಗಿದ್ದು ಆರೋಗ್ಯವಾಗಿದ್ದರು.
ಇಂದು ಬೆಳಗ್ಗೆ ಬೊಳುವಾರಿನ ಅವರ ರೂಮ್ ನಲ್ಲಿ ನಿಧನರಾದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎನ್ನಲಾಗಿದೆ.
ಅವರು ಸುಳ್ಯ ಗಾಂಧಿನಗರ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು.