ಸವಣೂರು ಬೂತ್ ಸಮಿತಿ 65ರಲ್ಲಿ ಮನ್ ಕೀ ಬಾತ್ ವೀಕ್ಷಣೆ
ಸವಣೂರು ಬೂತ್ ಸಮಿತಿ 65ರಲ್ಲಿ ಮನ್ ಕೀ ಬಾತ್ ವೀಕ್ಷಣೆ
ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಸವಣೂರು ಶಕ್ತಿಕೇಂದ್ರದ ಬೂತ್ ಸಮಿತಿ 65ರಲ್ಲಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಸದಸ್ಯರಾದ ಇಂದಿರಾ ಇವರ ಮನೆಯಲ್ಲಿ ವೀಕ್ಷಿಸಲಾಯಿತು.
ಸಭೆಯಲ್ಲಿ ಸವಣೂರು ಬೂತ್ ಸಂಖ್ಯೆ 65ರ ಅಧ್ಯಕ್ಷರಾದ ತೀರ್ಥರಾಮ ಕಡೆಂಜಿ, ಕಾರ್ಯದರ್ಶಿ ಸತೀಶ್ ಬಲ್ಯಾಯ, ಸವಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಚೇತನ್ ಕೋಡಿಬೈಲು, ಪಂಚಾಯತಿ ಸದಸ್ಯರಾದ ಇಂದಿರಾ ಬೇರಿಕೆ, ಚಂದ್ರಾವತಿ ಸುಣ್ಣಾಜೆ ಹಾಗೂ ಶೇಷಪ್ಪ ನಾಯ್ಕ್, ವೇದಾವತಿ, ಉಮೇಶ್ ಹಾಗೂ ಸಕ್ರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.