• 7 ಡಿಸೆಂಬರ್ 2024

ಯೋಗಾಸನ ದಲ್ಲಿ ಯಶ್ವಿನ್ ಅಳಕೆ ಕಂಚಿನ ಪದಕದೊಂದಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

 ಯೋಗಾಸನ ದಲ್ಲಿ ಯಶ್ವಿನ್ ಅಳಕೆ ಕಂಚಿನ ಪದಕದೊಂದಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
Digiqole Ad

ಯೋಗಾಸನ ದಲ್ಲಿ ಯಶ್ವಿನ್ ಅಳಕೆ ಕಂಚಿನ ಪದಕದೊಂದಿಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ,ಅವಿನಾಶ್ ಯೋಗ ಮತ್ತು ಅರೋಬಿಕ್ಸ್ ಸಂಸ್ಥೆ ಮತ್ತು ಆಚಾರ್ಯ ಯೋಗ ಯೂತ್ ಕ್ಲಬ್ (ರಿ.) ಇವರ ಜಂಟಿ ಆಶ್ರಯ ದಲ್ಲಿ 03ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯನ್ನು ಬೆಂಗಳೂರಿನ ರಾಜಾಜಿನಗರ ದಲ್ಲಿ 24 ನವಂಬರ್ 2024 ದಂದು ಆಯೋಜಿಸಲಾಗಿತ್ತು. 10 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಯಶ್ವಿನ್ ತೃತೀಯ ಸ್ಥಾನ ಗಳಿಸಿ ಫೆಬ್ರವರಿ ಯಲ್ಲಿ ದುಬೈ ನಲ್ಲಿ ನಡೆಯುಲಿರುವ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಇವರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು ನಲ್ಲಿ 2ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಕಲ್ಮಡ್ಕ ಗ್ರಾಮ ದ ಅಳಕೆ ನಿವಾಸಿ ಶ್ರೀ ಚಂದ್ರಶೇಖರ ಮತ್ತು ಶ್ರೀಮತಿ ಅಶ್ವಿನಿ ರವರ ಪುತ್ರ. ನಿರಂತರ ಯೋಗ ಕೇಂದ್ರ ನಿಂತಿಕಲ್ಲು ಇಲ್ಲಿಯ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ