• 7 ಡಿಸೆಂಬರ್ 2024

ಪುತ್ತೂರು ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

 ಪುತ್ತೂರು ಕೊಕ್ಕೊ  ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ
Digiqole Ad

ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್‌ ಚೋಲ್‌ಗೆ ಬೇಡಿಕೆ

ಕೆಲವು ತಿಂಗಳ ಹಿಂದೆ ಧಾರಣೆ ಏರಿಕೆಯ ದಾಖಲೆ ಬರೆದಿದ್ದ ಹಸಿಕೊಕ್ಕೊ ಧಾರಣೆ ಈಗ ಮತ್ತೆ ಚೇತರಿಕೆ ಕಂಡಿದೆ. 150 ರೂ. ಗಡಿ ದಾಟುವ ಮೂಲಕ ಏರಿಕೆಯ ಸೂಚನೆ ತೋರಿಸಿದೆ.
ಈ ಹಿಂದೆ ಹಸಿ ಕೊಕ್ಕೊ ಧಾರಣೆ ಕೆ.ಜಿ.ಗೆ 300 ರೂ.ಗಡಿಗೆ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಅನಂತರ ಏಕಾಏಕಿ ಕುಸಿತ ಕಂಡು 100 ರೂ.ಗಿಂತ ಕೆಳಗೆ ಇಳಿದಿತ್ತು. ಪ್ರಸ್ತುತ ಹಸಿ ಕೊಕ್ಕೊ ಧಾರಣೆ ಏರಿಕೆ ಕಂಡರೆ, ಒಣ ಕೊಕ್ಕೊ ಧಾರಣೆ ಸ್ಥಿರವಾಗಿ ಮುಂದುವರಿದಿದೆ.
ನ.14ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊಗೆ ಕೆ.ಜಿ.ಗೆ 90-100 ರೂ.ನಲ್ಲಿದ್ದ ಧಾರಣೆ ನ.27ರಂದು 150 ರೂ.ಗೆ ಏರಿಕೆ ಕಂಡಿದೆ. ಎರಡೇ ವಾರದಲ್ಲಿ ಕೆ.ಜಿ.ಯೊಂದರಲ್ಲಿ 60 ರೂ.ನಷ್ಟು ಹೆಚ್ಚಳ ಕಂಡಿದೆ. ನ.15ರಂದು ಕೆ.ಜಿ.ಗೆ 125 ರೂ.ಗೆ ಏರಿಕೆ ಕಂಡಿದ್ದ ಧಾರಣೆ, ನ.21ಕ್ಕೆ 130ಕ್ಕೆ ಜಿಗಿದಿತ್ತು.
ಮಾರುಕಟ್ಟೆಗಳ ಮೂಲಗಳ ಪ್ರಕಾರ ಹಸಿಕೊಕ್ಕೊಗೆ ಮತ್ತಷ್ಟು ಬೇಡಿಕೆ ಸೃಷ್ಟಿಯಾಗಲಿದೆ. ಇನ್ನೊಂದೆಡೆ ಒಣ ಕೊಕ್ಕೊ ಧಾರಣೆ 550 ರೂ.ಯಲ್ಲಿ ಸ್ಥಿರವಾಗಿದೆ. ಹಿಂದೊಮ್ಮೆ ಈ ಧಾರಣೆ 1 ಸಾವಿರ ರೂ. ಗಡಿ ತಲುಪಿತ್ತು. ಹೊರ ಮಾರುಕಟ್ಟೆಯಲ್ಲಿ ಹಸಿಕೊಕ್ಕೊ ಧಾರಣೆ ಕೆ.ಜಿ.ಗೆ 155 ರೂ. ತನಕ ಇದ್ದು, ಒಣ ಕೊಕ್ಕೊ ಧಾರಣೆ 600 ರೂ. ತನಕವೂ ಇತ್ತು.

Digiqole Ad

ಈ ಸುದ್ದಿಗಳನ್ನೂ ಓದಿ