ಪ್ರಗತಿ ವಿದ್ಯಾಸಂಸ್ಥೆಗೆ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸಮಗ್ರ. ವಿಜ್ಞಾತ್ರಿ ಬಿ, ಸಿಂಚನಾ ಎಂ ಆರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಪ್ರಗತಿ ವಿದ್ಯಾಸಂಸ್ಥೆಗೆ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸಮಗ್ರ.
ವಿಜ್ಞಾತ್ರಿ ಬಿ, ಸಿಂಚನಾ ಎಂ ಆರ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಕಾಣಿಯೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರಿನಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಪ್ರಗತಿ ವಿದ್ಯಾ ಸಂಸ್ಥೆಯ ವಿಜ್ಞಾತ್ರಿ ಬಿ (9) ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಸಿಂಚನ ಎಂ ಆರ್(10) ಪ್ರಬಂಧದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶ್ರಾವ್ಯ ರೈ (9) ತುಳು ಭಾಷಣ ದ್ವಿತೀಯ, ಮಾನ್ವಿ ಜಿ ಎಸ್ (10), ರಾಶಿ ಕೆ ಸಿ(10 ),ಗ್ರೀಷ್ಮ ರೈ (10), ಗ್ರೀಷ್ಮ ಕೆ ಎಚ್(10), ಅನುಶ್ರೀ ಎ ಎಂ (10), ಶ್ರದ್ಧಾ ಕೆ ಡಿ(10) ಕವ್ವಾಲಿಯಲ್ಲಿ ದ್ವಿತೀಯ ,
ಮಿಮಿಕ್ರಿ ಅಕ್ಷಯ್ ಕೆ ಎಸ್(9) ತೃತೀಯ, ಕವನವಾಚನ ರಾಶಿ ಕೆ ಸಿ (10 )ತೃತೀಯ, ಇಂಗ್ಲೀಷ್ ಭಾಷಣ ಪೃಥ್ವಿ ಎಂ (9 ) ತೃತೀಯ, ಕನ್ನಡ ಭಾಷಣ ಶ್ರೀಮಾ ಕೆ ಎಚ್ (8) ತೃತೀಯ, ಗಝಲ್ ರಾಶಿ ಕೆ ಸಿ (10) ತೃತೀಯ , ಆಶುಭಾಷಣ ಕೆ ಪ್ರಣಮ್ಯ ರೈ(9 ) ತೃತೀಯ ಸ್ಥಾನವನ್ನು ಗಳಿಸಿಕೊಳ್ಳುವ ಮೂಲಕ ಸಂಸ್ಥೆಯು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.
ವಿಜೇತರನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕರಾದ ಶ್ರೀ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ, ಮುಖ್ಯಗುರುಗಳು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು. ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್, ಶಿಕ್ಷಕಿಯರಾದ ಕವಿತಾ ವಿ ರೈ, ಚಿತ್ರಕಲಾ ಎಂ, ಜಯಶೀಲ ಸಹಕರಿಸಿದರು.