• 25 ಜನವರಿ 2025

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ:

 ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ:
Digiqole Ad

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ:

ಸುಬ್ರಮಣ್ಯ: ದಕ್ಷಿಣ ಕನ್ನಡದ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವ ನಡೆಯುತ್ತಿರಬೇಕಾದರೆ ಭಾನುವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷವಾಗಿ ಭಕ್ತರಲ್ಲಿ ಆತಂಕ ಸೃಷ್ಟಿಸಿರುವ ಘಟನೆಯೊಂದು ನಡೆದಿದೆ.

ದೇವಸ್ಥಾನದ ವ್ಯಾಸ ಮಂದಿರದ ಬಳಿ ಕಾಡಾನೆ ಕಾಣಿಸಿಕೊಂಡಿದ್ದು, ಬಳಿಕ ಪಕ್ಕದ ಮಠದ ಸಭಾಂಗಣದೊಳಗೆ ಕೂಡ ಧಾವಿಸಿದೆ. ಇದರಿಂದ ಕೆಲ ಸಮಯ ಅಲ್ಲಿ ನೆರೆದಿದ್ದ ಜನರು ಭಯಭೀತರಾಗಿದ್ದರು.
ಕೆಲವು ಸಮಯ ಅಲ್ಲೇ ಓಡಾಟ ನಡೆಸಿದ್ದ ಕಾಡಾನೆಯು ಬಳಿಕ ಕಾಡಿನತ್ತ ತೆರಳಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ