• 25 ಜನವರಿ 2025

ಶಿಶಿಲ ಶಿಶಿಲೇಶ್ವರ ದೇವಸ್ಥಾನದ ಇತಿಹಾಸ ಮತ್ತು ಐತಿಹ್ಯ ಏನು ? ಶಿಶಿಲೇಶ್ವರನ ಲಿಂಗವು ಗೋಚರಿಸಿದ್ದು ಯಾರಿಗೆ…?ಇಲ್ಲಿದೆ 👇

 ಶಿಶಿಲ ಶಿಶಿಲೇಶ್ವರ ದೇವಸ್ಥಾನದ ಇತಿಹಾಸ ಮತ್ತು ಐತಿಹ್ಯ ಏನು ?  ಶಿಶಿಲೇಶ್ವರನ ಲಿಂಗವು ಗೋಚರಿಸಿದ್ದು ಯಾರಿಗೆ…?ಇಲ್ಲಿದೆ 👇
Digiqole Ad

ಶಿಶಿಲ ಶಿಶಿಲೇಶ್ವರ ದೇವಸ್ಥಾನದ ಇತಿಹಾಸ ಮತ್ತು ಐತಿಹ್ಯ ಏನು ?

ಶಿಶಿಲೇಶ್ವರನ ಲಿಂಗವು ಗೋಚರಿಸಿದ್ದು ಯಾರಿಗೆ…? ಇಲ್ಲಿದೆ 👇

ಇತಿಹಾಸ ಕಾಲದಲ್ಲಿ ಶಿಶಿಲವೊಂದು ಪ್ರಮುಖ ವ್ಯಾಪಾರ ಕೆಂದ್ರವಾಗಿತ್ತೆಂಬುದಕ್ಕೆ ಇಲ್ಲಿ ಬಲವಾದ ಸಾಕ್ಷಿಗಳಿವೆ. ಬಯಲು ಸೀಮೆ ಮತ್ತು ತುಳುನಾಡನ್ನು ಸಂಪರ್ಕಿಸುವ ದಾರಿಯೊಂದು ಇಲ್ಲಿದೆ.ಈ ದಾರಿಯನ್ನು ಅಚ್ಚುಕಟ್ಟಾಗಿ ಕಲ್ಲುಗಳಿಂದ ಅಲ್ಲಲ್ಲಿ ಕಟ್ಟಿರುವುದು ಕಾಣಬಹುದು. ಇದನ್ನು ಪೇರಾಟದ ಸಾದಿ ಎನ್ನುತ್ತಿದ್ದರು. ತುಳುನಾಡಿನಿಂದ ಬಯಲು ಸೀಮೆಗೆ, ಅಂತೆಯೇ ಬುಲು ಸೀಮೆಯಿಂದ ತುಳುನಾಡಿಗೆ ಕುದುರೆ ಅಥವಾ ಎತ್ತುಗಳ ಮೇಲೆ ಸಾಮಾನು, ಜೀವನಾವಶ್ಯಕ ವಸ್ತುಗಳನ್ನು ಸಾಗಿಸಿತ್ತಿದ್ದರು ಎಂಬುದಕ್ಕೆ ಅಲ್ಲಲ್ಲಿ ಕಾಣುವ ಕೋಟೆಗಳು, ವಿಶ್ರಾಂತಿಯ ಸ್ಥಳಗಳು , ಸಾಮಾನುಗಳನ್ನು ಏರಿಸಿ ಇಳಿಸುವ ಬಯಲುಗಳು, ಅದಲ್ಲೆ ಹೊಂದಿಕೊಂಡಿರುವ ಸ್ಥಳನಾಮಗಳು ಸಾಕ್ಷಿಯನ್ನು ಹೇಳುತ್ತಿವೆ. ಈ ದಾರಿಯ ಮುಂದೆ ಸಾಗಿ ಮೂಡಿಗೆರೆ ತಾಲೂಕಿನ ಬೈರಾಪುರ ಎಂಬಲ್ಲಿ ಭೈರವೇಶ್ವರ ದೇವಾಲಯದ ಸಮೀಪದಿಂದ ಹೋಗುತ್ತಿತ್ತು. ಈಗಲೂ ಶಿಶಿಲದ ಸಮೀಪದ ಕಾಡುಗಳ, ನದಿದಂಡೆಗಳ, ವಿಶಾಲ ಬಯಲುಗಳಲ್ಲಿರುವ ದೊಡ್ಡ ದೊಡ್ಡ ಪಂಚಾಂಗಗಳು, ಗದ್ದೆಗಳ ಕುರುಹುಗಳು, ತೆಂಗಿನಮರ ಗಾತ್ರದ ವೀಳ್ಯದೆಲೆ ಬಳ್ಳಿಗಳು,ಕಡೆಯವ ಕಲ್ಲುಗಳು, ನೀರಾವರಿಗಾಗಿ ನಾಲೆಗಳಿರುವ ಕೆರೆಗಳುಅಚ್ಚರಿ ಹುಟ್ಟಿಸುತ್ತಿವೆ. ಇಲ್ಲಿಯ ಸುತ್ತಮುತ್ತಲಿನ ಶಿಬರಾಜೆ , ಶಿಬಾಜೆ ,ಶಿರಡಿ, ಶಿರಬಾಗಿಲು ಮುಂತಾದ ಊರುಗಳಿಗೆ ಶಿಶಿಲವೇ ಕೇಂದ್ರವಾಗಿದ್ದಿರಬಹುದೆಂದೂ ಈ ಪ್ರದೇಶದಲ್ಲಿ ಹಿಂದೆ ಹೇರಳ ಜನಸಂಖ್ಯೆ ಇದ್ದಿರಬಹುದೆಂದು ಸಂಶಯ ಹುಟ್ಟಿಸುತ್ತವೆ.
ಪ್ರಾಚೀನ ಕಾಲದಲ್ಲಿ ಶಿಶಿಲೇಶ್ವರನ ಮೂಲಸ್ಥಾನವಾದ ಕುಮಾರಗುಡ್ಡೆಯಲ್ಲಿ ಕಂದ ಮೂಲಗಳಾದ ನರೆ, ಕುರುಡುಗಳನ್ನು ಆಹಾರಕ್ಕಾಗಿ ಅಗೆದು ಸಂಗ್ರಹಿಸುತ್ತಿದ್ದ, ಪರಿಶಿಷ್ಟ ಜಾತಿಯ ‘ದೆಸಿಲು’ ಎಂಬವಳಿಗೆ ಮೊತ್ತಮೊದಲು ಅಲ್ಲಿ ಶಿಶಿಲೇಶ್ವರನ ಲಿಂಗವು ಗೋಚರಿಸಿತು. ಆಗ ಅವಳು ತನ್ನ ಜೊತೆಗಿದ್ದ ಬಂಧು ಕಿಲಮರತ್ತಾಯನಿಗೆ ಈ ವಿಚಾರವನ್ನಿ ತಿಳಿಸಿದಳು. ಇವರಿಬ್ಬರ ಮೂಲಕ ಈ ವಿವರವು ಇಡೀ ಊರಿಗೆ ಹಬ್ಬಿತು.ಹೀಗೆ ಈ ಶಿವಲಿಂಗದ ಇರವನ್ನು ಮೊತ್ತಮೊದಲು ಕಂಡು ಹಿಡಿದು, ಊರಿಗೆ ತಿಳಿಸಲು ಕಾರಣಳಾದ ಈ ಮಹಿಳೆಯ ಹೆಸರನ್ನು ಊರವರು ತಮ್ಮ ಊರಿಗೆ ಕೃತಜ್ಞತಾ ಪೂರ್ವಕವಾಗಿ ಇಟ್ಟುಕೊಂಡರು. ಹೀಗಾಗಿ ಅತೀ ಪ್ರಾಚೀನ ಕಾಲದಿಂದಲೂ ಈ ಊರಿಗೆ ‘ದೆಸಿಲು’ ಎಂಬ ಹೆಸರು ರೂಢಿಯಲ್ಲಿದೆ. ದೆಸಿಲು ಮತ್ತು ಕಿಲಮರತ್ತಾಯ ವರು ನರೆ ಕುರ್ಡು ಗಳನ್ನು ಅಗೆದಾಗ ಆ ಶಿವಲಿಂಗಕ್ಕೆ ಕತ್ತಿ ಭರ್ಚಿಗಳು ತಾಗಿ ಒಡಕು ಉಂಟಾದುದನ್ನು ಅವರು ಮರುಗಿ ಪಶ್ಚಾತ್ತಾಪ ಪಟ್ಟಿದ್ದರು.ಆ ಸುಂದರ ಲಿಂಗಕ್ಕೆ ಪೆಟ್ಟಾದುದನ್ನು ಮನಗಂಡು ನೊಂದ ಇವರು ಅದಕ್ಕೆ ಪ್ರಾಯಶ್ಚಿತವಾಗಿ ಬಲ್ಲವರ ಸೂಚನೆಯಂತೆ ಹತ್ತು ದಿನಗಳ ಪರ್ಯಂತ ಶಿವನಿಗೆ ತಮ್ಮ ಹಣೆಗಳಿಂದ ರಕ್ತವನ್ನು ಅರ್ಪಿಸುವುದರ ಮೂಲಕ ನೋವನ್ನನುಭವಿಸಿ ,ಸಮಾಧಾನ ಪಟ್ಟುಕೊಂಡರು.ಅನಂತರ ಆ ರಕ್ತಾರ್ಪಣವು ವಾಡಿಕೆಯಾಗಿ ,ಅವರ ವಂಶಜದಿಂದ ಪ್ರತಿವರ್ಷ ಶಿಶಿಲೇಶ್ವರನ ಜಾತ್ರೆಗೆ ಮೊದಲು ಮೇಘಮಾಸ ಇಪ್ಪತ್ತೇರಡನೇಯ ದಿನದಿನದಿಂದ ಹತ್ತು ದಿನಗಳ ಕಾಲ ಈ ವಿಧಿ ವಿಧಾನಗಳು ನಡೆದು ಬಂದಿದೆ. ಶಿವಲಿಂಗವನ್ನು ಲೋಕವರಿಯುವಂತೆ ಮಾಡಿದ ಹಾಗೂ ಲಿಂಗಕ್ಕೆ ತಮ್ಮಿಂದ ಗಾಯವಾದುದರ ಪ್ರಾಯಶ್ಚಿತವಾಗಿ ತಮ್ಮ ನೆತ್ತರನ್ನು ಪ್ರತಿ ವರ್ಷವೂ ಶಿವನಿಗೆ ದಶ ದಿನಗಳಲ್ಲಿ ಅರ್ಪಿಸುತ್ತಾ ಕೊನೆಗೊಂದು ದಿನ ಕಾಲಧರ್ಮವನೈದಿದ ದೆಸಿಲು ಕಿಲಮರತ್ತಾಯರನ್ನು ಅತಿಮಾನವರಾಗಿ ಕಂಡ ಊರವರು ಭೂತ ರೂಪದಲ್ಲಿ ಇವರನ್ನು ಪೂಜಿಸುತ್ತಾರೆ.

Digiqole Ad

ಈ ಸುದ್ದಿಗಳನ್ನೂ ಓದಿ