• 25 ಜನವರಿ 2025

ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನ ಎಂದು ಯಾಕೆ ಕರೆಯಲಾಗುತ್ತದೆ ?

 ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನ ಎಂದು ಯಾಕೆ ಕರೆಯಲಾಗುತ್ತದೆ ?
Digiqole Ad

ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನ ಎಂದು ಯಾಕೆ ಕರೆಯಲಾಗುತ್ತದೆ ?

ಅಂಬೇಡ್ಕರ್‌ ಅವರು ತಮ್ಮ ́ಬುದ್ಧ ಮತ್ತು ಅವರ ಧಮ್ಮ(Buddha and His Dhamma)ʼ ಗ್ರಂಥವನ್ನು ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಡಿಸೆಂಬರ್‌ 6, 1956 ರಲ್ಲಿ ಮರಣ ಹೊಂದುತ್ತಾರೆ.

ಇವರು ಒಂದು ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದ ನಂತರ ಅಂತಿಮವಾಗಿ 1956ರ ಅಕ್ಟೋಬರ್‌ 14ರಂದು 5,00,000 ಬೆಂಬಲಿಗರೊಂದಿಗೆ ಅಂಬೇಡ್ಕರ್‌ ಬೌದ್ಧಧರ್ಮಕ್ಕೆ ಮತಾಂತರಗೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅವರ ಅನುಯಾಯಿಗಳು ಇವರನ್ನು ಬೌದ್ಧ ನಾಯಕ ಎಂದೇ ಪರಿಗಣಿಸುತ್ತಾರೆ.
ಅಂಬೇಡ್ಕರ್‌ ಅವರ ಪಾರ್ಥೀವ ಶರೀರವನ್ನು ಮುಂಬೈನ ದಾದರ್‌ ಚೌಪಾಟಿಯಲ್ಲಿ ಬೌದ್ಧ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು.

ಭಾರತದಲ್ಲಿ ಅಸ್ಪೃಶ್ಯತೆಯ ನಿರ್ಮೂಲನೆಗೆ ಅವರ ನಿಲುವು ಮತ್ತು ಕೊಡುಗೆಗಳ ಕಾರಣ, ಅವರನ್ನು ಬೌದ್ಧ ಗುರು ಎಂದು ಪರಿಗಣಿಸಲಾಗಿದೆ. ಇವರ ಸಮಾಧಿ ಇರುವ ಸ್ಥಳವನ್ನು ಪವಿತ್ರ ಭೂಮಿ ಎಂದು ಗುರುತಿಸಲಾಗಿದೆ ಮತ್ತು ಇದನ್ನು ಇಂದು ಚೈತ್ಯ ಭೂಮಿ ಎಂದು ಕೂಡ ಕರೆಯಲಾಗುತ್ತದೆ.

ಅಂಬೇಡ್ಕರ್ ಅವರ ಅನುಯಾಯಿಗಳು ತಮ್ಮ ಗುರುಗಳು ಭಗವಾನ್ ಬುದ್ಧನಂತೆಯೇ ಪ್ರಭಾವಶಾಲಿ. ಶುದ್ಧ ಮನಸ್ಸಿನ ಹಾಗೂ ದೇವರಿಂದ ಆಶೀರ್ವಾದ ಹೊಂದಿದವರು ಎಂದು ನಂಬುತ್ತಾರೆ. ಸಮಾಜದಲ್ಲಿನ ಅವರ ಮಹಾನ್ ಕಾರ್ಯಗಳಿಂದಾಗಿ ಅವರಿಗೆ ಯಾವುದೇ ಕರ್ಮದ ಋಣ ಉಳಿದಿಲ್ಲ. ಇದೇ ಕಾರಣಕ್ಕೆ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾಪರಿನಿರ್ವಾಣ ದಿನ ಅಥವಾ ದಿವಸ್ ಎಂದು ಕರೆಯಲಾಗುತ್ತದೆ.

ಅಂಬೇಡ್ಕರ್‌ ಅವರ ಅನುಯಾಯಿಗಳು ಮತ್ತು ಇತರ ಭಾರತೀಯ ನಾಯಕರು ಈ ದಿನದಂದು ಚೈತ್ಯ ಭೂಮಿಯಲ್ಲಿ ಭಾರತೀಯ ಸಂವಿಧಾನ ಪಿತಾಮಹ ಅಂಬೇಡ್ಕರ್‌ ಅವರಿಗೆ ಗೌರವ ಸಲ್ಲಿಸುತ್ತಾರೆ.

ಚೈತ್ಯ ಭೂಮಿಯಲ್ಲಿನ ಆಚರಣೆಗಳು ಡಾ ಅಂಬೇಡ್ಕರ್ ಅವರು ತಮ್ಮ ದೇಶಕ್ಕಾಗಿ ನೀಡಿದ ಸಾಂವಿಧಾನಿಕ ಮತ್ತು ಸಾಮಾಜಿಕ ಎರಡೂ ಅಪಾರ ಕೊಡುಗೆಗಳನ್ನು ಗುರುತಿಸುತ್ತವೆ.

Digiqole Ad

ಈ ಸುದ್ದಿಗಳನ್ನೂ ಓದಿ