ಬಿಳಿನೆಲೆ :ಧರ್ಮಸ್ಥಳ ಯೋಜನೆಯ ಸಂಘಗಳಿಗೆ ಲಾಭಾಂಶ ವಿತರಣೆ
ಬಿಳಿನೆಲೆ :ಧರ್ಮಸ್ಥಳ ಯೋಜನೆಯ ಸಂಘಗಳಿಗೆ ಲಾಭಾಂಶ ವಿತರಣೆ
ಲಾಭಾಂಶದ ಹಣವನ್ನು ಉತ್ತಮ ಉದ್ದೇಶಕ್ಕೆ ವಿನಿಯೋಗಿಸಿ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸಲಹೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದಲ್ಲಿ ಲಾಭಾಂಶ ವಿತರಣೆ ಪ್ರಕ್ರೀಯೆಗೆ ಕೇಂದ್ರ ಒಕ್ಕೂಟದ ಅಧ್ಯಕ್ಷರ ಸಂಘದಲ್ಲಿ ಚಾಲನೆ ನೀಡಲಾಯಿತು.
ಬಿಳಿನೆಲೆ ವಲಯದಲ್ಲಿ 360 ಸಂಘಗಳು ಇದ್ದು ಸಂಘಗಳ ಗುಣಮಟ್ಟದ ಆರ್ಥಿಕ ವ್ಯವಹಾರದ ಆಧಾರದ ಮೇಲೆ ಸಂಘಗಳ ಸದಸ್ಯರುಗಳಿಗೆ ಲಾಭಾಂಶ ಬರುತ್ತಿದೆ.
ಕಡಬ ತಾಲೂಕಿನಲ್ಲಿ ಸಂಘಗಳಿಗೆ ಒಟ್ಟು 02 ಕೋಟಿ 65 ಲಕ್ಷ ಲಾಭಾಂಶ ಪ್ರಸ್ತುತ ವಿತರಣೆ ಮಾಡಲು ಇದ್ದು ಬಿಳಿನೆಲೆ ವಲಯದ ಸಂಘಗಳಿಗೆ 51ಲಕ್ಷ ಲಾಭಾಂಶ ಬಂದಿರುತ್ತದೆ.
ವಲಯದಲ್ಲಿ ಲಾಭಾಂಶ ವಿತರಣೆ ಪ್ರಕ್ರೀಯೆಯನ್ನು ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷರು ಬಿಳಿನೆಲೆ ವಲಯಾಧ್ಯಕ್ಷ ರಾದ ಸಂತೋಷ್ ಕೇನ್ಯರವರ ದತ್ತನಿಧಿ ಸಂಘದಲ್ಲಿ ವಿತರಣೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಲಾಭಾಂಶ ವಿತರಣೆ ಮಾಡಿದ ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಮಾತನಾಡಿ ವಲಯದಲ್ಲಿ 2021ರಲ್ಲಿ ಲಾಭಾಂಶ ವಿತರಣೆ ಆಗಿದ್ದು ಪ್ರಸ್ತುತ 2024ರಲ್ಲಿ ಸಂಘಗಳಿಗೆ ಲಾಭಾಂಶ ವಿತರಣೆಯಾಗುತ್ತಿದೆ. ಸಂಘಗಳಲ್ಲಿ ಸದಸ್ಶರು SBI ಬ್ಯಾಂಕ್ ಮೂಲಕ ಆರ್ಥಿಕ ವ್ಯವಹಾರವನ್ನು ಮಾಡುತ್ತಿದ್ದು ಪ್ರತೀ ವಾರ ಕ್ರಮಬದ್ದವಾಗಿ ಉಳಿತಾಯ, ಸಾಲ ಮರುಪಾವತಿ ಮಾಡಿಕೊಂಡು ಸಂಘದಲ್ಲಿ ಗುಣಮಟ್ಟದ ಆರ್ಥಿಕ ವ್ಯವಹಾರವನ್ನು ಮಾಡಿರುವುದರಿಂದ ಸಂಘದ ಸದಸ್ಯರಿಗೆ ಗರಿಷ್ಟ 10000ದ ವರೆಗೆ ಲಾಭಾಂಶ ಪಡೆಯಲು ಸಾಧ್ಯವಾಗಿರುತ್ತದೆ.
ವಲಯದಲ್ಲಿ 51ಲಕ್ಷ ಲಾಭಾಂಶ ವಿತರಣೆ ಗೆ ಇದ್ದು ಸಂಘದ ಗುಣಮಟ್ಟವನ್ನು ಇನ್ನಷ್ಟು ಸದೃಡಗೊಳಿಸಲು ಲಾಭಾಂಶ ಪ್ರೇರಣೆಯಾಗಲಿದೆ.
ಸಂಘದ ಎಲ್ಲಾ ಸದಸ್ಯರೂ ಹೆಚ್ಚು ಸಾಲದ ವ್ಯವಹಾರವನ್ನು ಮಾಡಿ ಹೆಚ್ಚು ಲಾಭಾಂಶ ಪಡೆಯಲು ಸದಸ್ಯರೆಲ್ಲರೂ ಆಸಕ್ತಿವಹಿಸಬೇಕು.
ಬಿಳಿನೆಲೆ ವಲಯದ ಸುಳ್ಯ ಕಾರ್ಯಕ್ಷೇತ್ರದ ಐತ್ತೂರು ಎ ಒಕ್ಕೂಟದ ಅಧ್ಯಕ್ಷರು ಬಿಳಿನೆಲೆ ವಲಯಾಧ್ಯಕ್ಷರೂ ಕಡಬ ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷರೂ ಆಗಿರುವ ಸಂತೋಷ್ ಕೇನ್ಯರವರ ದತ್ತನಿಧಿ ಪ್ರಗತಿಬಂಧು ಸಂಘದ ಆರು ಸದಸ್ಯರಿಗೆ 60000 ಲಾಭಾಂಶ ವಿತರಣೆಯನ್ನು ಮಾಡುತ್ತಿದ್ದು ಲಾಭಾಂಶದ ಹಣವನ್ನು ಸದಸ್ಯರ ವೈಯಕ್ತಿಕ ಖಾತೆಗೆ ನೇರವಾಗಿ ಸಂಘದಿಂದ ಜಮೆ ಯಾಗಲಿದೆ. ಬಂದಿರುವ ಲಾಭಾಂಶವನ್ನು ಉತ್ತಮ ಕೆಲಸಗಳಿಗೆ ವಿನಿಯೋಗಿಸುವಂತೆ ಮಾಹಿತಿ ನೀಡಿದರು.
ಈ ಸಂಧರ್ಭದಲ್ಲಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ರೇಖಾ ಹಾಗೂ ದತ್ತನಿಧಿ ಸಂಘದ ಸದಸ್ಯರುಗಳಾದ ಕೊರಗಪ್ಪ ಗೌಡ ,ˌಸಂತೋಷ್ ಕೇನ್ಯ, ˌವೆಂಕಪ್ಪ ಗೌಡ ಕೋಕಳˌಉಮೇಶ್ ಕೋಕಳˌ,ಪ್ರಶಾಂತ್ ಕುಮಾರ್ ಮತ್ತು ರಂಜೀತ್ ಕೋಕಳ ಉಪಸ್ಥಿತರಿದ್ದರು.