ಪುತ್ತೂರು : ಎ ಬಿ ವಿ ಪಿ ವತಿಯಿಂದ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸಾಮಾಜಿಕ ಸಾಮರಸ್ಯ ದಿವಸ್ ಆಚರಣೆ
ಪುತ್ತೂರು : ಎ ಬಿ ವಿ ಪಿ ವತಿಯಿಂದ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸಾಮಾಜಿಕ ಸಾಮರಸ್ಯ ದಿವಸ್ ಆಚರಣೆ
ವಿವೇಕಾನಂದ ಕಾನೂನು
ಮಹಾವಿದ್ಯಾಲಯದಲ್ಲಿ ದಿನಾಂಕ 06–12-2024 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ
ಅಂಬೇಡ್ಕರ್ ತಿಥಿಯನ್ನು ಸಾಮಾಜಿಕ ಸಾಮರಸ್ಯ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಮಾತೃ ಸುರಕ್ಷಾ ಪ್ರಮುಖ್ ಶ್ರೀ ಗಣರಾಜ್ ಭಟ್ ಕೆದಿಲದವರು ಆಗಮಿಸಿ ಅಂಬೇಡ್ಕರ್ ಕಂಡ ಕನಸಿನ ಭಾರತ ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸವನ್ನು ನೀಡಿದರು. ವೇದಿಕೆಯಲ್ಲಿ ಸಭಾ ಅಧ್ಯಕ್ಷರಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರಿನ ಪ್ರಾಂಶುಪಾಲರು ಶ್ರೀಮತಿ ಅಕ್ಷತಾ ಎ.ಪಿ, . ಗೌರವ ಉಪಸ್ಥಿತಿಯಾಗಿ ರಾಷ್ಟ್ರೀಯ ಸೇವಾ ಯೋಜನ ಘಟಕದ ಸಂಯೋಜಕ ಶ್ರೀ ಲಕ್ಷ್ಮಿಕಾಂತ್ ರೈ, ಕಾಲೇಜಿನ ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿ ಶ್ರೀ ಪ್ರದೀಪ್, ಹಾಗೂ ಕಾಲೇಜಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಅಭಿಷೇಕ್ ಉಪಸ್ಥಿತರಿದ್ದರು.