ಕಾಣಿಯೂರು ಶಾಲೆಯಿಂದ ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಪುಂಡಲೀಕಪ್ಪ ಪೂಜಾರ್ ರವರಿಗೆ ಗೆಳೆಯರ ಬಳಗ ಕೊಡಿಮಾರು ಅಬೀರ ವತಿಯಿಂದ ಸನ್ಮಾನ.
ಕಾಣಿಯೂರು ಶಾಲೆಯಿಂದ ವರ್ಗಾವಣೆಗೊಂಡ ಮುಖ್ಯ ಶಿಕ್ಷಕ ಪುಂಡಲೀಕಪ್ಪ ಪೂಜಾರ್ ರವರಿಗೆ ಗೆಳೆಯರ ಬಳಗ ಕೊಡಿಮಾರು ಅಬೀರ ವತಿಯಿಂದ ಸನ್ಮಾನ.
ಕಾಣಿಯೂರು ಶಾಲೆಯಲ್ಲಿ ಮುಖ್ಯಗುರುಗಳಾಗಿ ಹನ್ನೆರಡು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಶ್ರೀಯುತ ಪುಂಡಲೀಕಪ್ಪ ಪೂಜಾರ ಇವರು ವರ್ಗಾವಣೆ ಗೊಂಡಿರುವ ಕಾರಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರಿನಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಗೆಳೆಯರ ಬಳಗ ಕೊಡಿಮಾರು ಅಬೀರ ಇದರ ವತಿಯಿಂದ ಅವರನ್ನು ಸನ್ಮಾನ ಮಾಡಲಾಯಿತು.ಶಾಲು ಹೊದಿಸಿ ಪೇಟ ತೊಡಿಸಿ ಫಲ ಪುಷ್ಪ ನೀಡಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಈ ಸಂಧರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷರಾದ ಬಾಲಚಂದ್ರ ಅಬೀರ, ಕಾರ್ಯದರ್ಶಿ ಶ್ರೀನಿತ್ ಮಿಪಾಲು, ಗೆಳೆಯರ ಬಳಗದ ಗೌರವ ಸಲಹೆಗಾರರು, ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ಸದಸ್ಯರಾದ ಗೌರಿ ಮಾದೋಡಿ, ಜನಾರ್ಧನ ಆಚಾರ್ಯ ಅಬೀರ, ವಸಂತ ಕಂಡೂರು, ಕಾವ್ಯ ಕಂಡೂರು, ದಿವ್ಯ ಅಜಿರಂಗಳ, ಸುಮತಿ ಕಂಡೂರು ಉಪಸ್ಥಿತರಿದ್ದರು.