• 25 ಜನವರಿ 2025

ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಮರಣ ಸಾಂತ್ವನ ನಿಧಿ ವಿತರಣೆ

 ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಮರಣ ಸಾಂತ್ವನ ನಿಧಿ ವಿತರಣೆ
Digiqole Ad

ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಮರಣ ಸಾಂತ್ವನ ನಿಧಿ ವಿತರಣೆ

ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಕೇಂದ್ರ ಕಚೇರಿ ಮದುವದಲ್ಲಿ ಸಂಘಕ್ಕೆ ಸಕ್ರಿಯವಾಗಿ ಹಾಲು ಪೂರೈಸುತ್ತಿದ್ದ ಸದಸ್ಯರಾದ ಶ್ರೀ ಕೆಂಚಪ್ಪ ಗೌಡ ವಾಲ್ತಾಜೆ ಅವರು ನಿಧನ ಹೊಂದಿದ ಕಾರಣ ಮರಣ ಸ್ವಾಂತ್ವನ ನಿಧಿ ಚೆಕ್ಕನ್ನು (50000) ಐವತ್ತು ಸಾವಿರದ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಡೈರಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಸಂಘದ ಮೂಲಕ ಅವರ ಪತ್ನಿಯಾದ ನೀಲಮ್ಮರವರಿಗೆ ವಿತರಿಸಲಾಯಿತು.ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಕಲ್ಲೂರಾಯ , ಶ್ರೀಮತಿ ಶೃತಿ ಉಪ ವ್ಯವಸ್ಥಾಪಕರು ಕೆ ಎಂ ಎಫ್ ಮಂಗಳೂರು, ನಿಕಟ ಪೂರ್ವ ಅಧ್ಯಕ್ಷರಾದ ಧನಂಜಯ ಕೇನಾಜೆ ಉಪಾಧ್ಯಕ್ಷರಾದ ಕುಸುಮಾಧರ ಇಡ್ಯಡ್ಕ, ನಿರ್ದೇಶಕರಾದ ವಸಂತ ದಲಾರಿ, ಗೋಪಾಲಕೃಷ್ಣ ಬಾರೆಂಗಳ, ಗಣೇಶ ಮುಂಗ್ಲಿ ಮಜಲು, ವಾಸಪ್ಪಗೌಡ ನಾಣಿಲ , ರಾಮಚಂದ್ರ ಕೋಲ್ಪೆ, ರಾಮಣ್ಣ ಪೊನ್ನೆತ್ತಡಿ ಕಾಂತಪರವ, ರಾಜೀವಿ ಬೊಮ್ಮಳಿಗೆ, ಕುಸುಮಾವತಿ ಕಳ ಹಾಗೂ ಮತ್ತುಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ದಮಯಂತಿ ಮುದುವ ಸ್ವಾಗತಿಸಿ ವಂದಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ