ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಪ್ರೀತಮ್ ಶೆಟ್ಟಿ ಹೃದಯಾಘಾತಕ್ಕೆ ಬಲಿ:
ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಪ್ರೀತಮ್ ಶೆಟ್ಟಿ ಹೃದಯಾಘಾತಕ್ಕೆ ಬಲಿ:
ಕಾರ್ಕಳ: ರಾಜ್ಯ ಮಟ್ಟದ ಕಬಡ್ಡಿ ಆಟಗಾರ,ಉಜಿರೆ ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿ ಕಾರ್ಕಳದ ಮುಟ್ಲುಪಾಡಿ ನಡುಮನೆ ನಿವಾಸಿ ಪ್ರೀತಮ್ ಶೆಟ್ಟಿ (26) ಶುಕ್ರವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಅವರು ನಿನ್ನೆ ನಾಗಮಂಗಲದಲ್ಲಿ ನಡೆದಿದ್ದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಪಂದ್ಯ ಮುಗಿದ ಬಳಿಕ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಿಯ ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ.
ಪ್ರತಿಭಾನ್ವಿತ ಪ್ರೀತಮ್ ಅವರು ಶಿಕ್ಷಣದ ಜೊತೆ ಕ್ರೀಡೆಯಲ್ಲಿಯೂ ಆಸಕ್ತಿ ಹೊಂದಿದ್ದರು, ಶ್ರಮ ವಹಿಸಿ ಕಬಡ್ಡಿ ಆಟಗಾರನಾಗಿ ಖ್ಯಾತಿ ಪಡೆದಿದ್ದರು.